ನಮ್ಮ ಮೆಟ್ರೋದಲ್ಲಿ ಮನಕಲಕುವ ದೃಶ್ಯ: ತನ್ನ ಮಗುವಿನ ಅಸ್ಥಿಪಂಜರ ಎದೆಯ ಮೇಲೆ ಹೊತ್ತು ಅಲೆದಾಡಿದ ತಾಯಿ ಕೋತಿ

Updated on: Apr 15, 2026 | 2:35 PM

ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ತನ್ನ ಮೃತ ಮಗುವಿನ ಅಸ್ಥಿಪಂಜರವನ್ನೇ ಹೊತ್ತು ಓಡಾಡುತ್ತಿರುವ ತಾಯಿ ಮಂಗನ ದೃಶ್ಯ ವೈರಲ್ ಆಗಿದೆ. ಮಗುವಿನ ಸಾವನ್ನು ಒಪ್ಪಿಕೊಳ್ಳಲಾಗದೆ, ತಾಯಿ ತೋರುತ್ತಿರುವ ಈ ಅಗಾಧ ಮೌನ ವೇದನೆ ಎಲ್ಲರ ಮನಸ್ಸು ಕಲಕಿದೆ. ಪ್ರಾಣಿ ಪ್ರಪಂಚದಲ್ಲಿರುವ ಮಮಕಾರ, ದುಃಖ ಮತ್ತು ಬಾಂಧವ್ಯವನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಇದು ಜಗತ್ತಿನಲ್ಲಿ ತಾಯಿಯ ಪ್ರೀತಿಗೆ ಸಾಟಿಯಿಲ್ಲ ಎಂಬ ಸಂದೇಶ ಸಾರುತ್ತಿದೆ.

ಬೆಂಗಳೂರು, ಏ15: ಪ್ರೀತಿ ಮತ್ತು ಮಮಕಾರಕ್ಕೆ ಕೇವಲ ಮನುಷ್ಯರು ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದು ಸಾಕ್ಷಿಯಾಗಿದೆ. ತನ್ನ ಮಗು ಸಾವನ್ನಪ್ಪಿ ಅಸ್ಥಿಪಂಜರವಾದರೂ, ಅದನ್ನು ಬಿಟ್ಟುಕೊಡದೆ ಹೊತ್ತು ಸಾಗುತ್ತಿರುವ ಮಂಗನ ತಾಯಿಯ ದೃಶ್ಯವು ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.ಮಗು ಸಾವನ್ನಪ್ಪಿ ದಿನಗಳೇ ಕಳೆದಿದ್ದರೂ, ಆ ತಾಯಿ ಮಾತ್ರ ಮಗುವಿನ ಅಸ್ಥಿಪಂಜರವನ್ನೇ ತನ್ನ ಎದೆಯ ಮೇಲೆ ಹೊತ್ತುಕೊಂಡು ಮೆಟ್ರೋ ನಿಲ್ದಾಣದ ಆವರಣದಲ್ಲಿ ಓಡಾಡುತ್ತಿದೆ. ಮಗು ಸತ್ತಿದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಆ ತಾಯಿಯ ಮೌನ ವೇದನೆ ಅಲ್ಲಿನ ಜನರನ್ನು ಮರುಗುವಂತೆ ಮಾಡಿದೆ. ಪ್ರಾಣಿ ಪ್ರಪಂಚದಲ್ಲಿ ಅದರಲ್ಲೂ ಮಂಗಗಳಲ್ಲಿ ಈ ರೀತಿಯ ವರ್ತನೆ ವಿರಳವಾದರೂ, ಇದು ಅವುಗಳಿಗೂ ಮನುಷ್ಯರಂತೆ ದುಃಖ ಮತ್ತು ಬಾಂಧವ್ಯ ಇರುತ್ತದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಅಸ್ಥಿಪಂಜರವನ್ನೇ ಮಗುವೆಂದು ಭಾವಿಸಿ ರಕ್ಷಿಸುತ್ತಿರುವ ಆ ತಾಯಿಯ ಪ್ರೀತಿ ಸಾವನ್ನೂ ಮೀರಿಸುವಂತದ್ದು. ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಈ ಹೃದಯವಿದ್ರಾವಕ ದೃಶ್ಯವನ್ನು ಕಂಡು ಮಮ್ಮಲ ಮರುಗಿದ್ದಾರೆ. ಪ್ರಕೃತಿಯಲ್ಲಿನ ತಾಯ್ತನದ ಈ ಅಂತಿಮ ಸತ್ಯದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, “ಜಗತ್ತಿನಲ್ಲಿ ತಾಯಿಯ ಪ್ರೀತಿಗೆ ಸಾಟಿಯಿಲ್ಲ” ಎಂಬ ಸಂದೇಶ ಸಾರುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More