Bengaluru: ಸುಮಾರು ರೂ. 60 ಲಕ್ಷ ಮೌಲ್ಯದ ಕೈಗಡಿಯಾರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖದೀಮರು ಪೊಲೀಸ್ ವಶಕ್ಕೆ

ಅರುಣ್​ ಕುಮಾರ್​ ಬೆಳ್ಳಿ

Updated on: Jan 24, 2023 | 2:09 PM

ಜಮೀರ್ ಅಹ್ಮದ್ ಮತ್ತು ಶಬ್ಬಿರ್ ಹೆಸರಿನ ಇಬ್ಬರು ಖದೀಮರು ಒಂದು ಲಾರಿಯಲ್ಲಿ ಸುಮಾರು ರೂ. 58 ಲಕ್ಷದ 1,282 ವಾಚ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಆರ್ ಆರ್ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು:  ಜನಪ್ರಿಯ ಬ್ರ್ಯಾಂಡ್ ಕೈಗಡಿಯಾರಗಳ (wrist watches) ಶೋ ರೂಮೊಂದನ್ನು ನಿಮಗೆ ತೋರಿಸುತ್ತಿದ್ದೇವೆ ಅಂತ ಭಾವಿಸಬೇಡಿ. ಆಫ್ ಕೋರ್ಸ್ ಇವೆಲ್ಲ ಖ್ಯಾತ ಕಂಪನಿಗಳ ದುಬಾರಿ (expensive) ವಾಚುಗಳೇ. ಆದರೆ ಅವುಗಳನ್ನು ಹೀಗೆ ನೀಟಾಗಿ ಜೋಡಿಸಿಟ್ಟಿರುವುದು ಮಾತ್ರ ಬೆಂಗಳೂರು ಪೊಲೀಸ್ ಕಮೀಶನರ್ (police commissioner) ಅವರ ಕಚೇರಿಯಲ್ಲಿ! ಅಸಲಿಗೆ ಆಗಿದ್ದೇನೆಂದರೆ ಜನೆವರಿ 15 ರಂದು ಜಮೀರ್ ಅಹ್ಮದ್ ಮತ್ತು ಶಬ್ಬಿರ್ ಹೆಸರಿನ ಇಬ್ಬರು ಖದೀಮರು ಒಂದು ಲಾರಿಯಲ್ಲಿ ಸುಮಾರು ರೂ. 58 ಲಕ್ಷದ 1,282 ವಾಚ್ ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಆರ್ ಆರ್ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.