ಬೆಂಗಳೂರು: ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಅಪಘಾತ ಮಾಡಿ ಅಪಘಾತಕ್ಕೊಳಗಾದವರ ಮೇಲೆಯೇ ಹಲ್ಲೆ ನಡೆಸಿದರೆ?

ಅರುಣ್​ ಕುಮಾರ್​ ಬೆಳ್ಳಿ

Updated on: Mar 08, 2024 | 12:24 PM

ಮಾಧುರಿ ತಮ್ಮ ಮೊಬೈಲ್ ನಲ್ಲಿ ಲಕ್ಷ್ಮಿಯ ರಂಪಾಟ ಮಾಡುತ್ತಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಮುಂದಾದಾಗ ಪಾನಮತ್ತರಾಗಿದ್ದ ನಟಿ ಅದನ್ನು ಕಿತ್ತುಕೊಂಡು ರೆಕಾರ್ಡಿಂಗ್ ಡಿಲೀಟ್ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸೋದರಿಯರ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಲಕ್ಷ್ಮಿ ಸಿದ್ದಯ್ಯ ಅವಾಚ್ಯ ಪದಗಳಲ್ಲಿ ತನ್ನ ಮಕ್ಕಳನ್ನು ಬೈದಾಡಿದ್ದಾರೆ ಎಂದು ಅವರು ಹೇಳಿದ್ದಾರೆ

ಬೆಂಗಳೂರು: ಹಾಗೆ ನೋಡಿದರೆ ಈ ಘಟನೆ ನಡೆದು ಮೂರು ಬರೋಬ್ಬರಿ ಮೂರು ತಿಂಗಳಾಗಿದೆ. ಲಕ್ಷ್ಮಿ ಸಿದ್ದಯ್ಯ (Lakshmi Siddaiah) ಹೆಸರಿನ ಕಿರುತೆರೆ ನಟಿ ತನ್ನ ಕಾರನ್ನು ಸ್ಕೂಟರ್ ಒಂದಕ್ಕೆ ಗುದ್ದಿ ರಂಪಾಟ ನಡೆಸಿದ ಪ್ರಸಂಗ ಈಗ ಬಯಲಾಗಿದೆ. ಡಿಸೆಂಬರ್ 6 ರಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣದ (Jnana Bharathi Metro Station) ಬಳಿ ಲಕ್ಷ್ಮಿ ತಮ್ಮ ಕಾರಿನ ಮುಂದೆ ಸಾಗುತ್ತಿದ್ದ ಸ್ಕೂಟರ್ (scooter) ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನ ಓಡಿಸುತ್ತಿದ್ದ ಮಾಧುರಿ (Madhuri) ಮತ್ತು ಅವರ ಸಹೋದರಿ ಐಶ್ವರ್ಯ (Aishwarya) ನೆಲಕ್ಕೆ ಬಿದ್ದು ತಲೆ ಮತ್ತು ದೇಹದ ಬೇರೆ ಭಾಗಗಳಲ್ಲಿ ಪೆಟ್ಟಾಗಿದೆ. ತಪ್ಪು ತನ್ನದೇ ಆದರೂ ಲಕ್ಷ್ಮಿ ಸೋದರಿಯ ಮೇಲೆ ರೇಗಾಡಿ ಹಲ್ಲೆ ಕೂಡ ನಡೆಸಿದ್ದಾರೆ. ಮಾಧುರಿ ತಮ್ಮ ಮೊಬೈಲ್ ನಲ್ಲಿ ಲಕ್ಷ್ಮಿಯ ರಂಪಾಟ ಮಾಡುತ್ತಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಮುಂದಾದಾಗ ಪಾನಮತ್ತರಾಗಿದ್ದ ನಟಿ ಅದನ್ನು ಕಿತ್ತುಕೊಂಡು ರೆಕಾರ್ಡಿಂಗ್ ಡಿಲೀಟ್ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸೋದರಿಯರ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಲಕ್ಷ್ಮಿ ಸಿದ್ದಯ್ಯ ಅವಾಚ್ಯ ಪದಗಳಲ್ಲಿ ತನ್ನ ಮಕ್ಕಳನ್ನು ಬೈದಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕಾರಲ್ಲಿ ಕುಳಿತಿರುವ ನಟಿ ರೋಪ್ ಹಾಕುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಲ್ಡರ್​ನನ್ನು 1 ವರ್ಷ​ ಬಂಧನದಲ್ಲಿಟ್ಟು ಆಸ್ತಿ ಕಬಳಿಕೆ ಆರೋಪ; FIR ಹಾಕಿ ತನಿಖೆ ಶುರು ಮಾಡಿದ ಜ್ಞಾನಭಾರತಿ ಪೊಲೀಸರು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.