Loading video

Lokayukta Raid: ಭ್ರಷ್ಟ ಅಧಿಕಾರಿಯ ಮನೆಯಲ್ಲಿ ಸಿಕ್ತು ರಾಶಿ ರಾಶಿ ಚಿನ್ನದ ಒಡವೆ

|

Updated on: Jun 01, 2023 | 9:54 AM

ಬೆಸ್ಕಾಂನ ಟೆಕ್ನಿಕಲ್ ಚೀಫ್ ಇಂಜಿನಿಯರ್ ಹೆಚ್.ಜೆ ರಮೇಶ್​ರ ಬಸವೇಶ್ವರನಗರದ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಿ ಅಧಿಕಾರಿಗಳು, ಮನೆಯಲ್ಲಿ 1.4 ಕೋಟಿ ಮೌಲ್ಯದ ದ್ವಿಚಕ್ರ ವಾಹನ, ಕಾರು, ಗೃಹೋಪಯೋಗಿ ಉಪಕರಣಗಳು, ವಿಸ್ಕಿ ಪತ್ತೆಯಾಗಿದೆ.

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಫ್ಯಾಕ್ಟರಿ ಮತ್ತು ಬಾಯ್ಲರ್ ಇಲಾಖೆಯ ಟಿವಿ ನಾರಾಯಣಪ್ಪರ ವಿಜಯನಗರದ ಮನೆ ಸೇರಿ 10 ಕಡೆಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ದಾಳಿ ವೇಳೆ 22.50 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳು, ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿದ್ರೆ, ಇನ್ನು ಬೆಸ್ಕಾಂನ ಟೆಕ್ನಿಕಲ್ ಚೀಫ್ ಇಂಜಿನಿಯರ್ ಹೆಚ್.ಜೆ ರಮೇಶ್​ರ ಬಸವೇಶ್ವರನಗರದ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಿ ಅಧಿಕಾರಿಗಳು, ಮನೆಯಲ್ಲಿ 1.4 ಕೋಟಿ ಮೌಲ್ಯದ ದ್ವಿಚಕ್ರ ವಾಹನ, ಕಾರು, ಗೃಹೋಪಯೋಗಿ ಉಪಕರಣಗಳು, ವಿಸ್ಕಿ ಪತ್ತೆಯಾಗಿದೆ. 4.20 ಕೋಟಿ ಮೌಲ್ಯದ ಏರೋಸ್ಪೇಸ್ ಪಾರ್ಕ್, ಪ್ಲಾಟ್ ಸೇರಿದಂತೆ 5.60 ಕೋಟಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.