Video: ಎದೆ ಮೇಲೆ ರಾಹುಲ್ ಗಾಂಧಿ ಟ್ಯಾಟು ಹಾಕಿಸಿಕೊಂಡ ಯುವಕ; ರಾಹುಲ್ ಗಾಂಧಿ ದಿಲ್ ಖುಷ್
ಅಭಿಮಾನಿಯೊಬ್ಬ ತನ್ನ ಎದೆ ಮೇಲೆ ರಾಹುಲ್ ಗಾಂಧಿ ಟ್ಯಾಟು ಹಾಕಿಸಿಕೊಂಡು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾನೆ. ಇದನ್ನು ನೋಡಿದ ರಾಹುಲ್ ಗಾಂಧಿಗೆ ಸಖತ್ ಖುಷಿಯಾಗಿದೆ ಮಾರಾಯ್ರೆ.
ಒಬ್ಬೊಬ್ಬೊರು ಒಂದೊಂದು ರೀತಿಯಲ್ಲಿ ಅಭಿಮಾನವನ್ನು ತೋರಿಸುತ್ತಾರೆ. ಅದೇ ರೀತಿಯಲ್ಲಿ ತೆಲಂಗಾಣದ ಯುವಕನೊಬ್ಬ ರಾಹುಲ್ ಗಾಂಧಿ (Rahul Gandhi)ಯ ಮೇಲಿನ ಅಭಿಮಾನವನ್ನು ಟ್ಯಾಟೂ (Tattoo) ಹಾಕುವ ಮೂಲಕ ತೋರಿಸಿದ್ದಾನೆ. ರಮೇಶ್ ನಾಯ್ಕ್ ಎಂಬ ಯುವಕ ತನ್ನ ಎದೆ ಮೇಲೆ ರಾಹುಲ್ ಗಾಂಧಿ ಟ್ಯಾಟು ಹಾಕಿಸಿಕೊಂಡು ಮೈಸೂರಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra)ಯಲ್ಲಿ ರಾಹುಲ್ ಗಾಂಧಿ ಜೊತೆ ನಡೆದಿದ್ದಾನೆ. ಶರ್ಟ್ ಕಳಚಿ ಎದೆ ಮೇಲೆ ಬಿಡಿಸಿದ ಟ್ಯಾಟೂಗಳನ್ನು ತೋರಿಸುತ್ತಾ ಯಾತ್ರೆಯಲ್ಲಿ ಸಾಗಿದ್ದಾನೆ. ಎದೆ ಮೇಲೆ ತನ್ನ ಟ್ಯಾಟು ನೋಡಿದ ರಾಹುಲ್ ಗಾಂಧಿಗೆ ದಿಲ್ ಖುಷ್ (ಸಂತೋಷ) ಆಗಿದೆ ಮಾರಾಯ್ರೆ.
ಮತ್ತಷ್ಟು ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Oct 03, 2022 09:50 AM