ಬಿಗ್ ಬಾಸ್​ನಿಂದ ಭವ್ಯಾಗೆ ಸಿಕ್ಕಿದೆ ಕಡಿಮೆ ಪೇಮೆಂಟ್? ಅವರ ಮಾತಿನ ಅರ್ಥವೇನು?

Updated on: Feb 01, 2025 | 8:55 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಈಗ ಅವರಿಗೆ ದೊಡ್ಮನೆಯಲ್ಲಿ ಕಡಿಮೆ ಪೇಮೆಂಟ್ ಸಿಕ್ತಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಅದಕ್ಕೆ ಕಾರಣ ಆಗಿದ್ದು ಅವರ ಹೇಳಿಕೆ.

‘ಬಿಗ್ ಬಾಸ್​’ನಲ್ಲಿ ಸ್ಪರ್ಧಿಸೋ ಪ್ರತಿಯೊಬ್ಬರಿಗೂ ಸಂಭಾವನೆ ಸಿಗುತ್ತದೆ. ಆದರೆ, ಅದು ಎಷ್ಟು ಸಿಗುತ್ತದೆ ಎಂಬ ವಿಚಾರವನ್ನು ಯಾರೂ ರಿವೀಲ್ ಮಾಡೋದಿಲ್ಲ. ಹೀಗಿರುವಾಗಲೇ ಭವ್ಯಾಗೆ ಕಡಿಮೆ ಸಂಭಾವನೆ ಸಿಕ್ಕಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ‘ಪೇಮೆಂಟ್ ಜಾಸ್ತಿ ಇದೆ ಅಂತ ನೀವೇನೆ ಅಂದುಕೊಂಡಿರೋದು. ನಾನು ಹೋಗುವಾಗ ಕಡಿಮೆ ಬೇಡಿಕೆ ಇತ್ತು. ಈಗ ಬೇಡಿಕೆ ಹೆಚ್ಚಿದೆ. ಸಂಭಾವನೆ ಬಗ್ಗೆ ಬೇಸರ ಇಲ್ಲ. ಇಷ್ಟು ಕಡಿಮೆ ತೆಗೆದುಕೊಂಡ್ನಾ ಎಂದು ಅನಿಸಿಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More