ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್

Updated on: Jul 30, 2026 | 10:49 AM

ಗರ್ಭಿಣಿಯಾಗಿದ್ದರೂ ಬೆಂಬಲ ನೀಡಿದ ಪತ್ನಿ ಹರ್ಷಿಕಾ ಪೂಣಚ್ಚ ಅವರಿಗೆ ಬುಲ್ಲಿ ಸಿನಿಮಾದ ಈವೆಂಟ್‌ನಲ್ಲಿ ನಟ ಭುವನ್ ಪೊನ್ನಣ್ಣ ಅವರು ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಸ್ಯಭರಿತವಾಗಿ ಭುವನ್‌ರನ್ನು ತಮಾಷೆ ಮಾಡಿ ನೆರೆದಿದ್ದವರ ಗಮನ ಸೆಳೆದರು. ಹರ್ಷಿಕಾ ಸಿನಿಮಾ ತಂಡಕ್ಕೆ ನೀಡಿದ ಸಪೋರ್ಟ್‌ ಬಗ್ಗೆ ಭುವನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬುಲ್ಲಿ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಭುವನ್ ಪೊನ್ನಣ್ಣ ಅವರು ತಮ್ಮ ಪತ್ನಿ ಹರ್ಷಿಕಾ ಪೂಣಚ್ಚ ಅವರ ಸಿನಿಮಾ ನಿರ್ಮಾಣಕ್ಕೆ ನೀಡಿದ ಅಪಾರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಹರ್ಷಿಕಾ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರೂ, ಚಿತ್ರತಂಡಕ್ಕೆ ಶ್ರಮಿಸಿದ್ದಾರೆ ಎಂದು ಭುವನ್ ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಹಾಸ್ಯಭರಿತವಾಗಿ ಮಧ್ಯಪ್ರವೇಶಿಸಿ, ಭುವನ್‌ರನ್ನು ತಮಾಷೆ ಮಾಡಿದರು. ‘ನೀವಿಬ್ಬರೂ ಮದುವೆ ಆಗಿದ್ದೀರಾ ಅಥವಾ ಇಟ್ಟುಕೊಂಡಿದ್ದೀರಾ’ ಎಂದು ಭುವನ್ ಅವರನ್ನು ಓಂ ಪ್ರಕಾಶ್ ಪ್ರಶ್ನೆ ಮಾಡಿದರು. ಪತಿ-ಪತ್ನಿ ಆಗಿದ್ದರೂ ಇಬ್ಬರ ಮಧ್ಯೆ ಥ್ಯಾಂಕ್ಸ್ ಏಕೆ ಎಂಬುದು ಓಂ ಪ್ರಕಾಶ್ ಪ್ರಶ್ನೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮತ್ತು ಊರ್ವಶಿ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More