ಒಂದು ರನ್ಗಾಗಿ ಇಷ್ಟೆಲ್ಲ ಪೋಸ್ ಬೇಕಿತ್ತಾ ಪಾಂಡ್ಯ? ಅಯ್ಯೋ ದೇವ
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಬ್ಯಾಟಿಂಗ್‌ಗೆ ಇಳಿಯುವ ಮುನ್ನ ಮೈದಾನದ ಹೊರಗೆ ಭರ್ಜರಿ ವಾರ್ಮ್-ಅಪ್ ನಡೆಸಿ ಅಬ್ಬರಿಸಿದ ಹಾರ್ದಿಕ್, ಕ್ರೀಸ್‌ನಲ್ಲಿ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ವಾರ್ಮ್-ಅಪ್ ವಿಡಿಯೋ ಮತ್ತು ಅವರ ಸ್ಕೋರ್ ಕಾರ್ಡ್ ಅನ್ನು ಹೋಲಿಸಿ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.
ಮುಂಬೈ, ಏ.24: ಐಪಿಎಲ್ 2026ರ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಬ್ಯಾಟಿಂಗ್‌ಗೆ ಇಳಿಯುವ ಮುನ್ನ ಮೈದಾನದ ಹೊರಗೆ ಭರ್ಜರಿ ವಾರ್ಮ್-ಅಪ್ ನಡೆಸಿ ಅಬ್ಬರಿಸಿದ ಹಾರ್ದಿಕ್, ಕ್ರೀಸ್‌ನಲ್ಲಿ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಪಂದ್ಯದ ಸಂಕಷ್ಟದ ಸಮಯದಲ್ಲಿ ಮುಂಬೈ ತಂಡಕ್ಕೆ ಹಾರ್ದಿಕ್ ಆಸರೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಡಗೌಟ್ ಬಳಿಕ ಹಾರ್ದಿಕ್ ಪಾಂಡ್ಯ ನೆಟ್ಸ್‌ನಲ್ಲಿ ಹಾಗೂ ಮೈದಾನದ ಬದಿಯಲ್ಲಿ ವಾರ್ಮ್-ಅಪ್ ಮಾಡುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನು ಕಂಡ ಅಭಿಮಾನಿಗಳು “ಇಂದು ಹಾರ್ದಿಕ್ ಅಬ್ಬರ ಖಚಿತ” ಎಂದು ಭಾವಿಸಿದ್ದರು. ಆದರೆ, ಕ್ರೀಸ್‌ಗೆ ಬಂದ ಹಾರ್ದಿಕ್ ಎದುರಿಸಿದ ಮೊದಲ ಕೆಲವು ಎಸೆತಗಳಲ್ಲೇ ಪರದಾಡಿದರು. ಅಂತಿಮವಾಗಿ ಕೇವಲ 1 ರನ್ ಗಳಿಸಿ ಬೇಜವಾಬ್ದಾರಿಯುತ ಶಾಟ್ ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟಾದರು. ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ವಾರ್ಮ್-ಅಪ್ ವಿಡಿಯೋ ಮತ್ತು ಅವರ ಸ್ಕೋರ್ ಕಾರ್ಡ್ ಅನ್ನು ಹೋಲಿಸಿ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. “ವಾರ್ಮ್-ಅಪ್‌ನಲ್ಲಿ ತೋರಿದ ಆಟ ಪಂದ್ಯದಲ್ಲಿ ಕಾಣಿಸಲಿಲ್ಲ” ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಸತತ ಸೋಲುಗಳಿಂದ ಕಂಗಾಲಾಗಿರುವ ಈ ಸಮಯದಲ್ಲಿ ನಾಯಕನ ಈ ಪ್ರದರ್ಶನ ತಂಡದ ಮೇಲೆ ಮತ್ತಷ್ಟು ಒತ್ತಡ ಹೇರಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ