ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ; ವೋಟಿಂಗ್ ಪ್ರಕ್ರಿಯೆ ಆರಂಭ

Updated on: Aug 24, 2026 | 9:32 AM

‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಮುಖ್ಯ ಮನೆಗೆ ಕಳುಹಿಸಲು 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ವೀಕ್ಷಕರಿಗೆ ನೀಡಲಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ವೋಟಿಂಗ್ ಲೈವ್ ಆಗಿದೆ. ಕಠಿಣ ಟಾಸ್ಕ್‌ಗಳನ್ನು ಎದುರಿಸುತ್ತಿರುವ ಸ್ಪರ್ಧಿಗಳಲ್ಲಿ ಯಾರು ಬಿಗ್ ಬಾಸ್ ಫ್ಲೈಟ್ ಏರಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದ್ದು, ಅಭಿಮಾನಿಗಳು ಈಗಲೇ ವೋಟ್ ಮಾಡಬಹುದಾಗಿದೆ.

ಬಿಗ್ ಬಾಸ್ ಕನ್ನಡದ ಹೊಸ ಆವೃತ್ತಿಯ ‘ಅಗ್ನಿಪರೀಕ್ಷೆ’ ಹಂತ ತೀವ್ರ ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಮುಖ್ಯ ಮನೆಗೆ ಹೋಗುವ 18 ಸ್ಪರ್ಧಿಗಳಲ್ಲಿ 3 ಸ್ಪರ್ಧಿಗಳನ್ನು ನೇರವಾಗಿ ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ವೀಕ್ಷಕರಿಗೆ ನೀಡಲಾಗಿದೆ. 60 ಸ್ಪರ್ಧಿಗಳಿಂದ ಆರಂಭವಾದ ಈ ಕಠಿಣ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ಗೆಲುವಿಗಾಗಿ ಹೋರಾಡುತ್ತಿದ್ದಾರೆ.

ಈ ಅಗ್ನಿಪರೀಕ್ಷೆಯಲ್ಲಿ ಹಲವು ಟಾಸ್ಕ್ ನೀಡಲಾಗುತ್ತಿದೆ. ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. 3 ಪ್ಯಾಸೆಂಜರ್‌ಗಳನ್ನು ಆಯ್ಕೆ ಮಾಡಲು ವೀಕ್ಷಕರಿಗೆ ಅವಕಾಶನೀಡಲಾಗಿದೆ. ಈಗಾಗಲೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೋಟಿಂಗ್ ಆರಂಭವಾಗಿದೆ. ಒಬ್ಬರಿಗೆ ಒಂದು ಮತ ಹಾಕುವ ಅವಕಾಶ ಇದೆ. ಇಲ್ಲಿಂದ ಆಯ್ಕೆಯಾಗಿ ಹೋಗುವ 3 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ನಿರೂಪಕ ಸುದೀಪ್ ತಿಳಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಶನಿವಾರ-ಭಾನುವಾರ ರಾತ್ರಿ 9 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರ ರಾತ್ರಿ 9:30ಕ್ಕೆ ಈ ಶೋ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us