ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?

Updated on: Jan 31, 2025 | 6:37 PM

Bigg Boss Kannada season 11: ಬಿಗ್​ಬಾಸ್ ಮನೆಯಲ್ಲಿದ್ದಾಗ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ನಡುವೆ ಆತ್ಮೀಯ ಗೆಳೆತನ ಇತ್ತು. ಇದೀಗ ಬಿಗ್​ಬಾಸ್​ನಿಂದ ಹೊರ ಬಂದ ಮೇಲೆ ಭವ್ಯಾಗೆ ಕೆಲವು ಸಿನಿಮಾ, ಧಾರಾವಾಹಿಗಳ ಅವಕಾಶಗಳು ಬರುತ್ತಿವೆಯಂತೆ ಆದರೆ ಯಾವುದನ್ನೂ ಅಂತಿಮ ಮಾಡಿಲ್ಲ. ತ್ರಿವಿಕ್ರಮ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಖಂಡಿತ ನಟಿಸುವೆ ಎಂದಿದ್ದಾರೆ ಭವ್ಯಾ ಗೌಡ.

ಬಿಗ್​ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಹನುಮಂತ ಗೆದ್ದಿದ್ದಾರೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಬಿಗ್​ಬಾಸ್ ಮನೆಯಲ್ಲಿದ್ದಾಗ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ನಡುವೆ ಆತ್ಮೀಯ ಗೆಳೆತನ ಇತ್ತು. ತ್ರಿವಿಕ್ರಮ್, ಭವ್ಯಾಗೆ ಪ್ರೊಪೋಸ್ ಮಾಡಿದ್ದಾರೆ ಎಂಬ ಸುದ್ದಿ ಬಿಗ್​ಬಾಸ್ ಮನೆಯ ಒಳಗೆ ಹರಿದಾಡಿತ್ತು. ಆದರೆ ಅಂಥಹದ್ದೇನೂ ಇಲ್ಲ ಎಂದು ಇಬ್ಬರೂ ಹೇಳಿದ್ದಾರೆ. ಭವ್ಯಾ ಸಹ ಫಿನಾಲೆ ವರೆಗೆ ಬಂದು ಕಪ್​ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಬಿಗ್​ಬಾಸ್ ಅನುಭವವನ್ನು ಟಿವಿ9 ಜೊತೆಗೆ ಹಂಚಿಕೊಂಡಿರುವ ಭವ್ಯಾ ಗೌಡ, ತಮ್ಮ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಮಾತನಾಡಿದ್ದಾರೆ. ಭವ್ಯಾ ಗೌಡಗೆ ಕೆಲವು ಸಿನಿಮಾ, ಸೀರಿಯಲ್ ಅವಕಾಶಗಳು ಈಗಾಗಲೇ ಬರುತ್ತಿವೆಯಂತೆ. ಭವ್ಯಾ ಮತ್ತು ತ್ರಿವಿಕ್ರಮ್ ಅವರು ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆಗೆ, ಅವಕಾಶ ಸಿಕ್ಕರೆ ಖಂಡಿತ ಒಟ್ಟಿಗೆ ನಟಿಸುತ್ತೇವೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us