‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ

Updated on: Sep 11, 2026 | 8:42 AM

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಕಾವ್ಯ ಗೌಡ ಮತ್ತು ಗಗನ್ ಚಿಕಪ್ಪ ನಡುವೆ ತೀವ್ರ ವಾಗ್ವಾದ ನಡೆದಿದೆ. ಅಡುಗೆಮನೆ ಜವಾಬ್ದಾರಿ ಹಾಗೂ ಕಸ ವಿಲೇವಾರಿ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ಮಾತಿನ ಚಕಮಕಿಗೆ ಕಾರಣವಾಯಿತು. ಕಸದ ಡಬ್ಬವನ್ನು ಸ್ವಚ್ಛಗೊಳಿಸುವ ಕುರಿತು ಗಗನ್ ನೀಡಿದ ಪ್ರತಿಕ್ರಿಯೆ ಕಾವ್ಯ ಗೌಡ ಅವರ ಅಸಮಾಧಾನಕ್ಕೆ ಕಾರಣವಾಯಿತು.

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಸ್ಪರ್ಧಿಗಳಾದ ಕಾವ್ಯಾ ಗೌಡ ಮತ್ತು ಗಗನ್ ಚಿಕಪ್ಪ ಅವರ ನಡುವೆ ಅಡುಗೆಮನೆಯ ಜವಾಬ್ದಾರಿ ಹಾಗೂ ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಘಟನೆಯು ಮನೆಯ ಸದಸ್ಯರಲ್ಲಿ ಅಸಮಾಧಾನ ಮೂಡಿಸಿದೆ.

ಅಡುಗೆಮನೆಯ ಹೊಣೆಗಾರಿಕೆ ಕುರಿತು ಚರ್ಚೆ ಆರಂಭವಾದಾಗ, ಡಸ್ಟ್‌ಬಿನ್ ಸ್ವಚ್ಛಗೊಳಿಸುವ ಬಗ್ಗೆ ಪ್ರಶ್ನೆ ಎದುರಾಯಿತು. ‘ಡಸ್ಟ್‌ಬಿನ್ ಕ್ಲೀನ್ ಮಾಡೋದು ಒಂದು ದೊಡ್ಡ ವಿಷಯ ಅಲ್ವೇ ಅಲ್ಲ’ ಎಂದು ಕಾವ್ಯಾ ಪ್ರತಿಕ್ರಿಯಿಸಿದರು. ಕಸವನ್ನು ಕವರ್‌ನಿಂದ ಹೊರಗೆ ಹಾಕಿರುವ ಕುರಿತು ಮತ್ತು ‘ಅದು ವೆಟ್ಟು, ಅಯ್ಯಯ್ಯೋ, ಚೀ ಚೀ ಚೀ’ ಎಂದು ಹೇಳಿ ಕೆಲಸದಿಂದ ನುಣುಚಿಕೊಳ್ಳುವ ಮನೋಭಾವದ ಬಗ್ಗೆ ಗಗನ್ ಅಸಮಾಧಾನ ವ್ಯಕ್ತಪಡಿಸಿದರು. ‘ ಈ ವರಸೆ ಎಲ್ಲ ನಡೆಯಲ್ಲ ಕಾವ್ಯ’ ಎಂದು ಗಗನ್ ಎಚ್ಚರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us