ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ತಾಂಡವ್ ರಾಮ್ ಕಂಬ್ಯಾಕ್ ಮಾಡಿದ್ದಾರೆ. ಅವರು ಬಂದ ಬಳಿಕ ಆಟದ ರೀತಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಿರುವಾಗಲೇ ತಾಂಡವ್ ರಾಮ್ ಅವರು ಮನೆಯ ಬಂದಿಯ ಮುಖವಾಡ ಬಿಚ್ಚಿಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳು ಯಾವ ರೀತಿ ಇದ್ದಾರೆ ಎಂಬುದನ್ನು ತೆರೆದಿಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳ ಮಧ್ಯೆ ಈ ವಿಷಯಕ್ಕೆ ಕಿರಿಕ್ ಜೋರಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ತಾಂಡವ್ ರಾಮ್ ದೊಡ್ಡ ಮಟ್ಟದ ಕಂಬ್ಯಾಕ್ ಮಾಡಿದ್ದಾರೆ. ಅವರು ಎಲಿಮಿನೇಟ್ ಆಗಿದ್ದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ಅವರು ಎಪಿಸೋಡ್ನ ವೀಕ್ಷಣೆ ಮಾಡಿದಂತೆ ಕಾಣಿಸುತ್ತಿದೆ. ಅವರು ಬರುತ್ತಿದ್ದಂತೆ ಕ್ಯಾಪ್ಟನ್ ಆಗಿದ್ದಾರೆ. ಇಷ್ಟೇ ಅಲ್ಲ ಯಾರ ಗುಣ ಹೇಗಿದೆ ಎನ್ನುವುದರ ಬೋರ್ಡ್ ಸಿಕ್ಕಿಸಿದ್ದಾರೆ. ‘ಸೌಂದರ್ಯಾ ಮುಖವಾಡ ಧರಿಸಿದ್ದಾರೆ’ ಎಂದು ತಾಂಡವ್ ಹೇಳಿದರೆ, ಆಸಿಯಾ ಸ್ನೇಹದಲ್ಲಿ ಲಾಭ ನೋಡುತ್ತಾರೆ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 02, 2026 08:40 AM
Loading...
Unable to load recommendations.
Follow Us
