ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ

Updated on: Dec 18, 2024 | 5:16 PM

Bigg Boss Kannada: ಬಿಗ್​ಬಾಸ್ ನೀಡಿದ ಟಾಸ್ಕ್ ಆಡಲು ಚೈತ್ರಾಗೆ ಸಾಧ್ಯವಾಗಿಲ್ಲ. ಚೆಂಡನ್ನು ಬ್ಯಾಲೆನ್ಸ್ ಮಾಡಲಾಗದೆ ಪದೇ ಪದೇ ಬೀಳಿಸಿದ್ದಾರೆ. ಚೈತ್ರಾ ಕೆಟ್ಟ ಪ್ರದರ್ಶನದಿಂದ ಉಗ್ರಂ ಮಂಜು, ಗೌತಮಿ ಕೋಪಗೊಂಡು ಬೈದಿದ್ದಾರೆ. ಇದರಿಂದ ಬೇಸರಗೊಂಡ ಚೈತ್ರಾ ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.

ಮಾಡಿದ ತಪ್ಪಿಗೆ ಬಿಗ್​ಬಾಸ್ ಮನೆಯ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ನಾಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಟಾಸ್ಕ್​ಗಳಲ್ಲಿ ಗೆಲ್ಲಬೇಕಿದೆ. ಇದರ ನಡುವೆ ಉದ್ದದ ಕಂಬದ ಮೇಲೆ ಚೆಂಡು ಇಟ್ಟು ಅದನ್ನು ಬ್ಯಾಲೆನ್ಸ್ ಮಾಡುವ ಟಾಸ್ಕ್​ ಅನ್ನು ಬಿಗ್​ಬಾಸ್ ಮನೆಯ ಸದಸ್ಯರಿಗೆ ನೀಡಿದ್ದಾರೆ. ಎದುರಾಳಿ ತಂಡದವರು ಚೆನ್ನಾಗಿ ಆಡಿದ್ದಾರೆ. ಆದರೆ ಚೈತ್ರಾಗೆ ಆ ಟಾಸ್ಕ್ ಆಡಲು ಸಾಧ್ಯವಾಗಿಲ್ಲ. ಚೆಂಡನ್ನು ಬ್ಯಾಲೆನ್ಸ್ ಮಾಡಲಾಗದೆ ಪದೇ ಪದೇ ಬೀಳಿಸಿದ್ದಾರೆ. ಚೈತ್ರಾ ಕೆಟ್ಟ ಪ್ರದರ್ಶನದಿಂದ ಉಗ್ರಂ ಮಂಜು, ಗೌತಮಿ ಕೋಪಗೊಂಡು ಬೈದಿದ್ದಾರೆ. ಇದರಿಂದ ಬೇಸರಗೊಂಡ ಚೈತ್ರಾ ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 18, 2024 05:13 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More