‘ಇನ್ಮೇಲೆ ಹೊಡೆದಾಡಲ್ಲ’: ಫಿನಾಲೆ ಹತ್ತಿರವಾದಾಗ ತಂತ್ರಗಾರಿಕೆ ಬದಲಿಸಿದ ವಿನಯ್​

Updated on: Dec 25, 2023 | 9:10 PM

ವಿನಯ್​ ಗೌಡ ಅವರು ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ. ‘ಇನ್ಮೇಲೆ ಹೊಡೆದಾಡಲ್ಲ. ನಿರ್ಧಾರ ಮಾಡಿದ್ದೇನೆ. ಇದು ನನ್ನ ಪ್ರಾಮಿಸ್​. ಎಷ್ಟು ನೀಟಾಗಿ ಆಡೋಕೆ ಆಗುತ್ತೋ ಅಷ್ಟು ನೀಟಾಗಿ ಆಡೋಣ’ ಎಂದು ಅವರು ಹೇಳಿದ್ದಾರೆ. ಈ ಮಾತು ಕೇಳಿ ಬಿಗ್​ ಬಾಸ್​ ಮನೆಯ ಇನ್ನುಳಿದ ಸದಸ್ಯರಿಗೆ ಅಚ್ಚರಿ ಆಗಿದೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋನಲ್ಲಿ 77 ದಿನಗಳು ಕಳೆದಿವೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ಬರಲಿದೆ. ಹಾಗಾಗಿ ದೊಡ್ಮನೆಯೊಳಗೆ ಪೈಪೋಟಿ ಹೆಚ್ಚಾಗಿದೆ. ಹೆಚ್ಚು ಅಗ್ರೆಸಿವ್​ ಆಗಿ ಆಡಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಆದರೆ ವಿನಯ್​ ಗೌಡ (Vinay Gowda) ಅವರು ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ. ‘ಇನ್ಮೇಲೆ ಹೊಡೆದಾಡಲ್ಲ. ನಿರ್ಧಾರ ಮಾಡಿದ್ದೇನೆ. ಇದು ನನ್ನ ಪ್ರಾಮಿಸ್​. ಎಷ್ಟು ನೀಟಾಗಿ ಆಡೋಕೆ ಆಗುತ್ತೋ ಅಷ್ಟು ನೀಟಾಗಿ ಆಡೋಣ’ ಎಂದು ವಿನಯ್​ ಗೌಡ ಹೇಳಿದ್ದಾರೆ. ಈ ಮಾತು ಕೇಳಿ ಬಿಗ್​ ಬಾಸ್​ ಮನೆಯ ಇನ್ನುಳಿದ ಸದಸ್ಯರಿಗೆ ಅಚ್ಚರಿ ಆಗಿದೆ. ‘ಇಷ್ಟು ದಿನ ಇವರು ಆಗ್ರೆಸಿವ್​ ಆಗಿ ಆಡಿದ್ರು. ಇನ್ಮೇಲೆ ನಾವು ಆ ರೀತಿ ಆಡೋಣ’ ಎಂದು ನಮ್ರತಾ ಗೌಡ (Namratha Gowda) ಹೇಳಿದ್ದಾರೆ. ‘ಕಲರ್ಸ್​ ಕನ್ನಡ’ ಚಾನೆಲ್​ನಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್​ ಬಾಸ್​ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಲೈವ್​ ನೋಡುವ ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More