ಬಿಗ್​ ಬಾಸ್​ ಮನೆಯಲ್ಲಿ ಕಳೆಯಿತು 75 ದಿನ; ಫಿನಾಲೆ ಟೆನ್ಷನ್​ ಈಗ ಶುರು

Updated on: Dec 22, 2023 | 7:16 PM

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಸ್ಪರ್ಧೆಯ ಕಾವು ಜೋರಾಗುತ್ತದೆ. ಈಗ 11 ಜನರ ನಡುವೆ ಹಣಾಹಣಿ ನಡೆಯುತ್ತಿದೆ. ದೊಡ್ಮನೆಯಲ್ಲಿ ಈಗ 75 ದಿನಗಳ ಕಳೆದಿದ್ದು, ಕೆಲವು ಸ್ಮರಣೀಯ ಸಂದರ್ಭವನ್ನು ಮೆಲುಕು ಹಾಕುವಂತಹ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಕಿರುತೆರೆ ಪ್ರೇಕ್ಷಕರ ಫೇವರಿಟ್​ ರಿಯಾಲಿಟಿ ಶೋ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada season 10) ಆರಂಭವಾಗಿ 75 ದಿನಗಳು ಕಳೆದಿವೆ. ಇನ್ನು 25 ದಿನಗಳು ಕಳೆದರೆ ಫಿನಾಲೆ ಎದುರಾಗಲಿದೆ. ಈ ಬಾರಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಗರಿಗೆದರಿದೆ. ವಿನಯ್​ ಗೌಡ (Vinay Gowda), ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​, ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ನಮ್ರತಾ ಗೌಡ, ಸಿರಿ, ಅವಿನಾಶ್​ ಶೆಟ್ಟಿ, ಡ್ರೋನ್​ ಪ್ರತಾಪ್​, ಮೈಕಲ್​ ಅಜಯ್​, ತನಿಷಾ ಕುಪ್ಪಂಡ ಅವರ ನಡುವೆ ಈಗ ಪೈಪೋಟಿ ನಡೆಯುತ್ತಿದೆ. ಫಿನಾಲೆಗೆ ಹೋಗಬೇಕು ಎಂಬ ಆಸೆ ಎಲ್ಲರಿಗೂ ಇದೆ. ಅದಕ್ಕಾಗಿ ಎಲ್ಲ ಟಾಸ್ಕ್​ನಲ್ಲೂ ಚೆನ್ನಾಗಿ ಆಡುತ್ತಿದ್ದಾರೆ. ಬಿಗ್​ ಬಾಸ್ (BBK 10)​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಸ್ಪರ್ಧೆಯ ಕಾವು ಜೋರಾಗುತ್ತದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಬಿಗ್​ ಬಾಸ್​ ಶೋ ಬಿತ್ತರ ಆಗುತ್ತಿದೆ. ‘ಜಿಯೋ ಸಿನಿಮಾ’ ಮೂಲಕ ಉಚಿತವಾಗಿ ಲೈವ್​ ನೋಡುವ ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More