ಸೊಂಟಪಟ್ಟಿಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಶುರುವಾಯ್ತು ಹೊಸ ತಲೆಬಿಸಿ

Updated on: Nov 11, 2024 | 7:34 PM

ಬಿಗ್ ಬಾಸ್ ಮನೆಯಲ್ಲಿ ಹೊಸ ನಿಯಮ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸೊಂಟಪಟ್ಟಿ ಕಟ್ಟಿಕೊಂಡು ಜೋಡಿಯಾಗಿಯೇ ಇರಬೇಕು. ಶೌಚಾಲಯಕ್ಕೆ ತೆರಳುವಾಗ ಮತ್ತು ರಾತ್ರಿ ನಿದ್ರೆ ಮಾಡುವಾಗ ಹೊರತುಪಡಿಸಿ ಇನ್ನುಳಿದ ಎಲ್ಲ ಸಂದರ್ಭದಲ್ಲೂ ಜೋಡಿಯಾಗಿ ಇರಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಈ ನಿಯಮದಿಂದಾಗಿ ದೊಡ್ಮನೆಯ ಸದಸ್ಯರಿಗೆ ತಲೆಬಿಸಿ ಹೆಚ್ಚಾಗಿದೆ.

ಧನರಾಜ್-ಮೋಕ್ಷಿತಾ, ಹನುಮಂತ-ಗೌತಮಿ, ಸುರೇಶ್​-ಅನುಷಾ, ಚೈತ್ರಾ-ಶಿಶಿರ್, ಐಶ್ವರ್ಯಾ-ಧರ್ಮ, ಮಂಜು-ಭವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಜೋಡಿಗಳಾಗಿದ್ದಾರೆ. ಈ ಜೋಡಿಗಳು ಸೊಂಟಪಟ್ಟಿ ಕಟ್ಟಿಕೊಂಡು ಜೊತೆಯಲ್ಲೇ ಇರಬೇಕು. ಮುಂದಿನ ಆದೇಶ ಬರುವವರೆಗೂ ಈ ನಿಯಮವನ್ನು ಪಾಲಿಸಬೇಕು. ಕ್ಯಾಪ್ಟನ್ ತ್ರಿವಿಕ್ರಮ್ ಅವರು ನಿಯಮಗಳನ್ನು ಓದಿ ಹೇಳಿದ್ದಾರೆ. ಅದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ನವೆಂಬರ್​ 11ರಂದು ಈ ಸಂಚಿಕೆ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More