ಎದುರಾಳಿಯಾಗಿ ಗಿಲ್ಲಿನ ಆಯ್ಕೆ ಮಾಡಿದ ಧ್ರುವಂತ್; ಗೆದ್ದಿದ್ದು ಯಾರು?

Updated on: Jan 06, 2026 | 8:52 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಟಾಸ್ಕ್ ವಿಷಯದಲ್ಲಿ ವೀಕ್ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಟಾಸ್ಕ್ ಒಂದರಲ್ಲಿ ಧ್ರುವಂತ್ ಅವರಿಗೆ ವಿಶೇಷ ಅವಕಾಶ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಹಾಗೂ ಗಿಲ್ಲಿ ಮಧ್ಯೆ ಟಾಸ್ಕ್ ನಡೆದಿದೆ. ಸ್ವತಃ ಧ್ರುವಂತ್ ಅವರು ಗಿಲ್ಲಿಯನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಈ ವೇಳೆ ಕಠಿಣ ಟಾಸ್ಕ್ ಒಂದನ್ನು ಬಿಗ್ ಬಾಸ್ ನೀಡಿದರು. ಈ ಟಾಸ್ಕ್ ಅಲ್ಲಿ ಗಿಲ್ಲಿ ಅವರು ಸೋತಿದ್ದಾರೆ ಎನ್ನಲಾಗಿದೆ. ಧ್ರುವಂತ್ ಅವರು ಗೆಲುವು ಕಂಡಿದ್ದಾರೆ. ಟಾಪ್ 6ಗೆ ಆಯ್ಕೆ ಆಗೋಕೆ ಆಡುತ್ತಿರುವ ಟಾಸ್ಕ್ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More