ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು

Updated on: Nov 12, 2026 | 4:03 PM

‘ಬಿಗ್ ಬಾಸ್ ಕನ್ನಡ 13’ ಶೋನಲ್ಲಿ ಆಸಿಯಾ ಮತ್ತು ಯಶಸ್ ಅವರು ಆಪ್ತವಾಗಿದ್ದರು. ಆದರೆ ಈಗ ಅವರ ನಡುವೆ ಕಿರಿಕ್ ಆಗಿದೆ. ಇಬ್ಬರೂ ನೇರಾನೇರ ಜಗಳ ಮಾಡಿಕೊಂಡಿದ್ದಾರೆ. ಯಶಸ್ ವರ್ತನೆಯನ್ನು ಆಸಿಯಾ ಅವರು ಖಂಡಿಸಿದ್ದಾರೆ. ಯಶಸ್ ಅವರದ್ದು ಸ್ವಾರ್ಥ ಬುದ್ಧಿ ಎಂಬುದು ಆಸಿಯಾಗೆ ಗೊತ್ತಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಆಸಿಯಾ ಹಾಗೂ ಯಶಸ್ ಅವರು ಆಪ್ತವಾಗಿದ್ದರು. ಆದರೆ ಈಗ ಅವರ ನಡುವೆ ಕಿರಿಕ್ ಆಗಿದೆ. ಇಬ್ಬರೂ ನೇರಾನೇರ ಜಗಳ ಮಾಡಿಕೊಂಡಿದ್ದಾರೆ. ಯಶಸ್ ವರ್ತನೆಯನ್ನು ಆಸಿಯಾ ಅವರು ಖಂಡಿಸಿದ್ದಾರೆ. ಯಶಸ್ ಅವರದ್ದು ಸ್ವಾರ್ಥ ಬುದ್ಧಿ ಎಂಬುದು ಆಸಿಯಾಗೆ ಗೊತ್ತಾಗಿದೆ. ಹಾಗಾಗಿ ಅವರು ಸ್ನೇಹಿತನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇಷ್ಟು ದಿನಗಳ ಕಾಲ ಇದ್ದ ಸ್ನೇಹದ ಪರದೆ ಈಗ ಸರಿದುಹೋಗಿದೆ. ಆಸಿಯಾ ಮತ್ತು ಯಶಸ್ ನಡುವಿನ ಜಗಳವನ್ನು ನೋಡಿ ಸೌಂದರ್ಯಾ ಶೆಟ್ಟಿ ಅವರು ಚಪ್ಪಾಳೆ ತಟ್ಟಿದ್ದಾರೆ. ಯಶಸ್ ಅವರಿಗೆ ಆಸಿಯಾ ನೇರವಾಗಿ ಸವಾಲು ಹಾಕಿದ್ದಾರೆ. ನವೆಂಬರ್ 12ರ ಬಿಗ್ ಬಾಸ್ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More