ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ರಾಜಕೀಯದ ಥೀಮ್ನಲ್ಲಿ ಟಾಸ್ಕ್ ನೀಡಲಾಗುತ್ತಿದೆ. ಸ್ಪರ್ಧಿಗಳು ಎರಡು ಬಣಗಳಾಗಿ ಆಟ ಆಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿರುವ ಗಾನವಿ ಅವರ ನಡೆ-ನುಡಿ ಬೇರೆ ರೀತಿ ಇದೆ. ಅವರು ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ರಾಜಕೀಯದ ಥೀಮ್ನಲ್ಲಿ ಟಾಸ್ಕ್ ನೀಡಲಾಗುತ್ತಿದೆ. ಸ್ಪರ್ಧಿಗಳು ಎರಡು ಬಣಗಳಾಗಿ ಆಟ ಆಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿರುವ ಗಾನವಿ ಅವರ ನಡೆ-ನುಡಿ ಬೇರೆ ರೀತಿ ಇದೆ. ಅವರು ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ. ತಾಂಡವ್ ರಾಮ್ ಅವರ ಪಕ್ಷವನ್ನು ಸೇರಲು ಗಾನವಿ ಒಪ್ಪಿಕೊಂಡಿಲ್ಲ. ‘ಕೋಟಿ ಕೊಟ್ಟರೂ ನಿಮ್ಮ ಪಕ್ಷಕ್ಕೆ ಬರಲ್ಲ. ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ’ ಎಂದು ಗಾನವಿ ಅವರು ನೇರವಾಗಿಯೇ ಹೇಳಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿರುವ ನವೆಂಬರ್ 13ರ ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ. ಈ ವಾರ ಗಾನವಿ ಅವರ ಆಟದ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ಒಂದು ಟಾಸ್ಕ್ ಮುಗಿದ ಬಳಿಕ ಅವರು ಮೆಮೊರಿ ಲಾಸ್ ಆದವರಂತೆ ನಟಿಸಿದ್ದರು. ಅದನ್ನು ಸೌಂದರ್ಯಾ ಶೆಟ್ಟಿ, ಪ್ರಶಾಂತ್ ಮುಂತಾದವರು ಕಟುವಾಗಿ ಟೀಕಿಸಿದ್ದರು. ಈ ಎಲ್ಲ ವಿಷಯಗಳು ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆಗೆ ಬರಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
