ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಕೇಳಿಬಂತು ಗಂಭೀರ ಆರೋಪ

Updated on: Sep 12, 2026 | 10:23 AM

ಬಿಗ್ ಬಾಸ್ ಮನೆಯ ಕಿಚನ್‌ನಲ್ಲಿ ಸೌಂದರ್ಯಾ ಶೆಟ್ಟಿ ಹಾಗೂ ಸಂಗೀತಾ ನಡುವೆ ಕೆಲಸದ ಹಂಚಿಕೆ ಕುರಿತು ಚರ್ಚೆ ನಡೆದಿದೆ. ಗಂಡುಮಕ್ಕಳ ಕೆಲಸ ಮತ್ತು ವುಮೆನ್ ಕಾರ್ಡ್ ಪ್ಲೇ ಮಾಡುವ ವಿಷಯದಲ್ಲಿ ಸೌಂದರ್ಯಾ ಎಚ್ಚರಿಕೆ ನೀಡಿದ್ದು, ತಡರಾತ್ರಿ ಅಡುಗೆ ಮಾಡಿಸುವ ಪ್ರವೃತ್ತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಮನೆಯ ಕಿಚನ್ ಏರಿಯಾದಲ್ಲಿ ಕೆಲಸದ ಹಂಚಿಕೆ ಹಾಗೂ ವುಮೆನ್ ಕಾರ್ಡ್ ಪ್ಲೇ ಮಾಡುವ ಕುರಿತು ಸ್ಪರ್ಧಿಗಳಾದ ಸೌಂದರ್ಯಾ ಶೆಟ್ಟಿ ಮತ್ತು ಸಂಗೀತಾ ನಡುವೆ ಚರ್ಚೆ ನಡೆದಿದೆ. ಕಿಚನ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ವೇಳೆ ಈ ಇಬ್ಬರೂ ಮನೆಮಂದಿಯ ನಡೆ-ನುಡಿಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ವಯಸ್ಸು, ಜಾತಿ, ಹಣ, ಲಿಂಗ ಯಾವುದೂ ಲೆಕ್ಕಕ್ಕರ ಬರೋದಿಲ್ಲ. ಎಲ್ಲರೂ ಇಲ್ಲಿ ಸಮಾನರು. ಆದರೆ, ಈ ಬಾರಿ ಮನೆಗೆಲಸ ಮಹಿಳೆಯರಿಗೆ ಮಾತ್ರ ವಹಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ‘ಇಲ್ಲಿ ಗಂಡುಮಕ್ಕಳು ಕೆಲಸ ಮಾಡುತ್ತಿಲ್ಲ, ಪ್ರತಿಯೊಬ್ಬರೂ ಎರಡೆರಡು ಕೆಜಿ ತೂಕ ಜಾಸ್ತಿ ಆಗಿದ್ದಾರೆ. ಅವರ ಕೆಲಸವನ್ನು ನಾನು ಮಾಡಲು ಸಾಧ್ಯವಿಲ್ಲ’ ಎಂದು ಸೌಂದರ್ಯಾ ನೇರವಾಗಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಂಗೀತಾ, ‘ಮಧ್ಯರಾತ್ರಿ ಕಾವ್ಯಾ ಬಳಿ ಅಡುಗೆ ಮಾಡಿಸಿದ್ದಾರೆ’ ಎಂದು ಆರೋಪಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More