ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಆಸಿಯಾನ ಅಣಕಿಸಿದ ವಿಡಿಯೋ ವೈರಲ್

Updated on: Sep 10, 2026 | 10:30 AM

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ತಮ್ಮ ಅಸಲಿ ಆಟವನ್ನು ಶುರುಮಾಡಿದ್ದಾರೆ. ಸಹ ಸ್ಪರ್ಧಿ ಆಸಿಯಾನ ಮಾತಿನ ಶೈಲಿ ಹಾಗೂ ನಡವಳಿಕೆಯನ್ನು ಸೌಂದರ್ಯಾ ಅಣಕಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೌಂದರ್ಯಾ ವರ್ತನೆಗೆ ವೀಕ್ಷಕರಿಂದ ತೀವ್ರ ಆಕ್ರೋಶ ಹಾಗೂ ಅಪಸ್ವರಗಳು ಕೇಳಿಬರುತ್ತಿವೆ.

ಬಿಗ್ ಬಾಸ್ ಮನೆಯಲ್ಲಿ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸ್ಪರ್ಧಿಗಳ ಅಸಲಿ ಮುಖಗಳು ಒಂದೊಂದಾಗಿ ಹೊರಬೀಳಲು ಶುರುವಾಗಿವೆ. ಸದಾ ನೇರ ಮಾತು ಹಾಗೂ ಬೋಲ್ಡ್ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಿದ್ದ ಸೌಂದರ್ಯಾ ಶೆಟ್ಟಿ ಆರಂಭದಲ್ಲಿ ಸೈಲೆಂಟ್ ಆಗಿದ್ದರು. ಇದೀಗ ಸಹ ಸ್ಪರ್ಧಿ ಆಸಿಯಾ ಅವರನ್ನು ಅಣಕಿಸುವ ಮೂಲಕ ಬಿಗ್ ಬಾಸ್ ಪ್ರೇಕ್ಷಕರ ಚರ್ಚೆಗೆ ಗ್ರಾಸವಾಗಿದ್ದಾರೆ.

ಆಸಿಯಾ ಮಾತನಾಡುತ್ತಿರುವ ಶೈಲಿ ಹಾಗೂ ನಡೆದುಕೊಳ್ಳುವ ರೀತಿಯನ್ನು ಸೌಂದರ್ಯಾ ಶೆಟ್ಟಿ ಇತರ ಸ್ಪರ್ಧಿಗಳ ಮುಂದೆ ಹಾವಭಾವ ಮಾಡಿ ತೋರಿಸುತ್ತಾ ಅಣಕಿಸಿದ್ದಾರೆ. ಆಸಿಯಾನ ವಾಯ್ಸ್ ಟೋನ್ ಹಾಗೂ ಎಕ್ಸ್‌ಪ್ರೆಷನ್‌ಗಳನ್ನು ನಕಲು ಮಾಡಿ ತೋರಿಸುತ್ತಾ ಸೌಂದರ್ಯಾ ಅಪಹಾಸ್ಯ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More