ಚಿತ್ರದುರ್ಗ‌ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಯುವಕರ ಬೈಕ್ ವೀಲಿಂಗ್, ಯುವಕರ ದುಸ್ಸಾಹಸಕ್ಕೆ ಪರದಾಡಿದ ವಾಹನ ಸವಾರರು

Edited By: ವಿವೇಕ ಬಿರಾದಾರ

Updated on: May 21, 2022 | 9:35 AM

ಚಿತ್ರದುರ್ಗ‌ದ ಗೋನೂರು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಯುವಕರು ವ್ಹೀಲಿಂಗ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಚಿತ್ರದುರ್ಗ: ಇತ್ತೀಚಿಗೆ ಬೈಕ್ ವೀಲಿಂಗ್ ಪ್ರಕರಣಗಳು ಹೆಚ್ಚಾಗಿದ್ದು, ಇದರಿಂದ ರಸ್ತೆಯಲ್ಲಿ ವಾಹನ ಸವಾರರಿಗೆ ಕಿರಿಕಿ ಉಂಟಾಗುತ್ತಿದೆ. ಅಲ್ಲದೇ ಕೆಲವರು ಬೈಕ್ ವೀಲಿಂಗ್ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗೇ ರಸ್ತೆ ಪಕ್ಕದಲ್ಲಿ ಹೋಗುವ ಪಾದಾಚಾರಿಗಳಿಗು ತೊಂದರೆಯಾಗುತ್ತಿದೆ. ಈ ಸಂಬಂಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಯುವಕರು ಮಾತು ಕೇಳೆದೆ ರಸ್ತೆಯಲ್ಲೇ ಪುಂಡಾಟವಾಡುತ್ತಾರೆ.

ಇದೇ ರೀತಿಯಾಗಿ ಚಿತ್ರದುರ್ಗ‌ದ ಗೋನೂರು ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಯುವಕರು ವ್ಹೀಲಿಂಗ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋನೂರು ಗ್ರಾಮದ ಅಂಡರ್ ಬ್ರಿಡ್ಜ್‌ ಬಳಿ ಸ್ಕೂಟಿಯಲ್ಲಿ ಇಬ್ಬರು, ಮೂವರು ಯುವಕರು ಕುಳಿತು ಬೈಕ್ ವೀಲಿಂಗ್ ಮಾಡಿದ್ದಾರೆ. ಜಿಟಿಜಿಟಿ ಮಳೆಯಲ್ಲೇ ಸ್ಕೂಟಿಯಲ್ಲಿ ವಾಹನಗಳು ಓಡಾಡುವ ರಸ್ತೆಯಲ್ಲೇ ಯುವಕರು ಬೈಕ್ ವೀಲಿಂಗ್ ಮಾಡಿದ್ದಾರೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿಯಾಗಿದೆ.

 

 

Loading...
Unable to load recommendations.
Follow Us
TV9 Web

TV9 Kannada

Read More