ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲಾಗದ ಬಿಜೆಪಿಗೆ ಭವಿಷ್ಯವಿಲ್ಲ, ಕಾಂಗ್ರೆಸ್ ಸೇರುತ್ತಿದ್ದೇನೆ: ಸುಕುಮಾರ್ ಶೆಟ್ಟಿ, ಮಾಜಿ ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2023 | 1:16 PM

ಬಿಜೆಪಿಯಲ್ಲಿ ಬೆಳೆಯುವ ಅವಕಾಶವಿಲ್ಲ, ಕಾಲೆಳೆಯುವವರ ಸಂಖ್ಯೆಯೇ ಜಾಸ್ತಿ ಎಂದು ಅವರು ಹೇಳಿದರು. ಚುನಾವಣೆ ಮುಗಿದು 4 ತಿಂಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನ್ನು ಆರಿಸಲಾಗದ ಮತ್ತು ಪಕ್ಷದ ರಾಜ್ಯ ಘಟಕಕ್ಕೆ ಅಧ್ಯಕ್ಷನನ್ನು ನೇಮಕ ಮಾಡಲಾಗದ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಶೆಟ್ಟಿ ಹೇಳಿದರು.

ಉಡುಪಿ: ಆಪರೇಶನ್ ಹಸ್ತ ಜಾರಿಯಲ್ಲಿದೆ ಅನ್ನೋದನ್ನು ಉಡುಪಿ ಬೈಂದೂರು ಮಾಜಿ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ (Sukumar Shetty) ಪ್ರೂವ್ ಮಾಡಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಟಿವಿ9 ಕನ್ನಡ ವಾಹಿನಿಯ ಉಡುಪಿ ವರದಿಗಾರನೊಂದಿಗೆ ಮಾತಾಡಿದ ಶೆಟ್ಟಿ, ಡಿಕೆ ಶಿವಕುಮಾರ್ (SK Shivakumar) ತನೆಗ 2-3 ಬಾರಿ ಕರೆ ಮಾಡಿದ್ದಾರೆ ಮತ್ತು ತಾನು ಕಾಂಗ್ರೆಸ್ ಸೇರಲಿರುವುದು ನಿಶ್ಚಿತ ಎಂದು ಹೇಳಿದರು. ತಮ್ಮ ನಿರ್ಧಾರದ ಹಿಂದೆ ಬೇರೆ ಕಾರಣಗಳೂ ಇವೆ ಎಂದು ಅವರು ಹೇಳಿದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೈಂದೂರು ಕ್ಷೇತ್ರದಲ್ಲಿ (Byndoor constituency) ಕಳೆದ 10 ವರ್ಷಗಳಿಂದ ಬಿಜೆಪಿ ಪ್ರಬಲಗೊಳ್ಳುವಂತೆ ಮಾಡಿದ್ದರೂ ಕಳೆದ ಸಲ ತನಗೆ ಟಿಕೆಟ್ ನೀಡಲಿಲ್ಲ. ಬಿಜೆಪಿಯಲ್ಲಿ ಬೆಳೆಯುವ ಅವಕಾಶವಿಲ್ಲ, ಕಾಲೆಳೆಯುವವರ ಸಂಖ್ಯೆಯೇ ಜಾಸ್ತಿ ಎಂದು ಅವರು ಹೇಳಿದರು. ಚುನಾವಣೆ ಮುಗಿದು 4 ತಿಂಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನ್ನು ಆರಿಸಲಾಗದ ಮತ್ತು ಪಕ್ಷದ ರಾಜ್ಯ ಘಟಕಕ್ಕೆ ಅಧ್ಯಕ್ಷನನ್ನು ನೇಮಕ ಮಾಡಲಾಗದ ಬಿಜೆಪಿಗೆ ಭವಿಷ್ಯವಿಲ್ಲ ಎಂದ ಶೆಟ್ಟಿ, ಮುಂಬರುವ ದಿನಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಸಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಮಕ್ಷಮದಲ್ಲಿ ಕಾಂಗ್ರೆಸ್ ಸೇರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.