Assembly Session: ಮುಖ್ಯಮಂತ್ರಿಗಳಿಗೆ ಬಹಳ ಹತ್ತಿರವಿದ್ದೀರಿ ಅಂತ ಜಮೀರ್ ಅಹ್ಮದ್ ಕಾಲೆಳೆದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 10, 2023 | 2:29 PM

ಆದರೆ ಸಚಿವ ಜಮೀರ್ ಶಾಸಕನ ಟ್ರ್ಯಾಪ್ ಗೆ ಬೀಳದೆ ರಸ್ತೆ ತನ್ನ ಖಾತೆಯ ಸುಪರ್ದಿಗೆ ಬರಲ್ಲ ಎಂದು ಹೇಳಿ ಕೂತುಬಿಡುತ್ತಾರೆ.

ಬೆಂಗಳೂರು: ವಿಧಾನ ಮಂಡಲದ ಕಾರ್ಯಕಲಾಪ ನಡೆಯುವಾಗ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekar ) ಮತ್ತು ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ನಡುವೆ ಕಿರು ಅವಧಿಯ ಒಂದು ಜುಗಲ್ ಬಂದಿ ನಡೆಯಿತು. ವಸತಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿಲ್ಲ ಎಂದು ಸೋಮಶೇಖರ್ ಹೇಳಿದಾಗ, ಸಚಿವ ಜಮೀರ್ ಎಲ್ಲ ವಿವರಗಳನ್ನು ಒದಗಿಸಿ ಅಪ್ರೋಚಿಂಗ್ ರಸ್ತೆ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಬರೋದ್ರಿಂದ ತಾನು ಅದನ್ನು ಮಾಡಲಾಗದು ಎನ್ನುತ್ತಾರೆ. ಸೋಮಶೇಖರ್ ಎದ್ದು ನಿಂತು, ನೀವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಳ ಹತ್ತಿರದಲ್ಲೀದ್ದೀರಿ, ಅವರಿಂದ ಯಾವುದಾದರೂ ಅನುದಾನ ಪಡೆದು ರಸ್ತೆ ಮಾಡಿಸಿಕೊಡಬಹುದು ಅಂತ ಕಾಲೆಳೆಯುತ್ತಾರೆ. ಆದರೆ ಸಚಿವ ಜಮೀರ್ ಶಾಸಕನ ಟ್ರ್ಯಾಪ್ ಗೆ ಬೀಳದೆ ರಸ್ತೆ ತನ್ನ ಖಾತೆಯ ಸುಪರ್ದಿಗೆ ಬರಲ್ಲ ಎಂದು ಹೇಳಿ ಕೂತುಬಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.