ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಲು ಯಾರಿಗೆ ಬಕೆಟ್ ಹಿಡಿದಿದ್ದರು? ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2023 | 6:09 PM

ಕಾಂಗ್ರೆಸ್ ಪಕ್ಷದಲ್ಲಾದರೆ, ತಾನು ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಕುರುಬರ ಸಮಾವೇಶ ಮಾಡುತ್ತಾರೆ ಮತ್ತು ಡಿಕೆ ಶಿವಕುಮಾರ್ ಒಕ್ಕಲಿಗರೆಲ್ಲ ತಮ್ಮ ಹಿಂದೆ ಬಂದು ನಿಂತುಕೊಳ್ಳಲಿ ಅನ್ನುತ್ತಾರೆ ಅಂತ ಈಶ್ವರಪ್ಪ ಗೇಲಿ ಮಾಡಿದರು. ಬಿಜೆಪಿ ಯಾವುದೇ ಜಾತಿಯ ನಾಯಕನನ್ನು ಓಲೈಸುವ ಅಥವಾ ಶೋಷಿಸುವ ಗೋಜಿಗೆ ಹೋಗಲ್ಲ ಎಂದು ಅವರು ಹೇಳಿದರು.

ವಿಜಯಪುರ: ಬಿಜೆಪಿ ಯಾವುದೇ ಜಾತಿಯ ನಾಯಕನನ್ನು ಓಲೈಸುವ ಅಥವಾ ಶೋಷಿಸುವ ಗೋಜಿಗೆ ಹೋಗಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಹೇಳಿದರು. ನಗರದಲ್ಲಿಂದು ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು ತಮ್ಮ ಬಲಭಾಗದಲ್ಲಿ ಕೂತಿದ್ದ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಅವರನ್ನು ತೋರಿಸಿ, ರಮೇಶ್ ಅವರನ್ನು ಬಿಜೆಪಿ ಯಾವತ್ತೂ ದಲಿತ ನಾಯಕ ಅಂತ ಟ್ರೀಟ್ ಮಾಡಲ್ಲ, ಬದಲಿಗೆ ಈ ಭಾಗದ ಒಬ್ಬ ಪ್ರಾಮಾಣಿಕ ನಾಯಕ, ರಾಜಕಾರಣಿ ಅಂತ ಪರಿಗಣಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಾದರೆ, ತಾನು ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ (Siddaramaiah) ಕುರುಬರ ಸಮಾವೇಶ ಮಾಡುತ್ತಾರೆ ಮತ್ತು ಡಿಕೆ ಶಿವಕುಮಾರ್ (DK Shivakumar) ಒಕ್ಕಲಿಗರೆಲ್ಲ ತಮ್ಮ ಹಿಂದೆ ಬಂದು ನಿಂತುಕೊಳ್ಳಲಿ ಅನ್ನುತ್ತಾರೆ ಅಂತ ಈಶ್ವರಪ್ಪ ಗೇಲಿ ಮಾಡಿದರು. ಪಕ್ಷದಲ್ಲಿ ಸ್ಥಾನಮಾನ ಗಿಟ್ಟಿಸಲು ಬಿಜೆಪಿ ನಾಯಕರು ಬಕೆಟ್ ಹಿಡಿಯುತ್ತಿದ್ದಾರೆ ಅಂತ ಜಗದೀಶ್ ಶೆಟ್ಟರ್ ಹೇಳಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಅವರು ಮುಖ್ಯಮಂತ್ರಿಯಾಗಲು ಯಾರು ಯಾರಿಗೆ ಬಕೆಟ್ ಹಿಡಿದಿದ್ದರಂತೆ ಅಂತ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.