ನೀವು ಮುಖ್ಯಮಂತ್ರಿ ಆದ್ರೆ ಶಾಪ, ಬರಗಾಲ ಬಂದುಬಿಡುತ್ತೆ ಅಂತಾ ಬಿಜೆಪಿ ಹೇಳ್ತಿದೆ ಎಂಬ ನೇರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಇಲ್ಲಿದೆ

ಸಾಧು ಶ್ರೀನಾಥ್​

Updated on: Jul 25, 2023 | 2:28 PM

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇವಾಗೆಲ್ಲ ಮಳೆ ಆಗ್ತಿದೆ, ನಾನು ಮೂಡನಂಭಿಕೆ ಮೌಡ್ಯ ನಂಬಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಗಳವಾರ ಹಾವೇರಿ ಜಿಲ್ಲೆಗೆ ಆಗಮಿಸಿದ್ದಾರೆ. ಅದಕ್ಕೂ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಬಂದು ಇನ್ನೂ ಒಂದು ತಿಂಗಳು ಕಳೆದಿದೆಯಷ್ಟೆ. ಸಚಿವರ ವಿರುದ್ಧ ಶಾಸಕರು ಯಾರೂ ದೂರು ಕೊಟ್ಟಿಲ್ಲ.. ಶಾಸಕಾಂಗ ಸಭೆ ಕರೀರಿ ಅಂದೀದಾರೆ… ಗುರುವಾರ ಶಾಸಕಾಂಗ ಸಭೆ ಕರೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಕಳೆದ ವಾರವೇ ಶಾಸಕಾಂಗ ಸಭೆ ಆಗಬೇಕಿತ್ತು. ರಾಹುಲ್ ಗಾಂಧಿ ಸಭೆ ಮಾಡ್ತೀವಿ ಎಂದಿದ್ರು, ಹಾಗಾಗಿ ಶಾಸಕಾಂಗ ಸಭೆ ಕರೆದಿರಲಿಲ್ಲ ಎಂದು ಶಾಸಕರ ಅಸಮಾಧಾನ ವಿಚಾರಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಎಲ್ಲ ಕಡೆ ಮಳೆ ಆಗ್ತಿದೆ, ಜೂನ್ ನಲ್ಲಿ ನಮಗೆ ಮಳೆ ಕೈ ಕೊಡ್ತು. ಜುಲೈನಲ್ಲಿ ವಾಡಿಕೆಗಿಂತ ಮಳೆ ಜಾಸ್ತಿಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಆರೇಳು ಜನ ರೈತರು ಸಾವನ್ನಪ್ಪಿದಾರೆ. ಹೀಗಾಗಿ ಹಾವೇರಿ ಜಿಲ್ಲೆಗೆ ಹೋಗ್ತೀದಿನಿ. ಅಲ್ಲಿಂದ ಮಳೆ ಎಲ್ಲಿ ಅಗಿದೆ ಅಲ್ಲಿ ಭೇಟಿ ನೀಡಲಾಗವುದು. ನಾನು ಕೂಡಾ ಮುಂದಿನ ದಿನಗಳಲ್ಲಿ ಉಡುಪಿ ಮಂಗಳೂರು ಕಡೆ ಹೋಗ್ತೀನಿ. ಇವಾಗೆಲ್ಲ ಮಳೆ ಆಗ್ತಿದೆ, ನಾನು ಮೂಡನಂಭಿಕೆ ಮೌಡ್ಯ ನಂಬಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರಗಾಲ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ಪ್ರಕೃತಿಯಲ್ಲಿ ಪ್ರವಾಹ, ಮಳೆ ಕೊರತೆ ಸಹಜ ಎಂದ ಸಿದ್ದರಾಮಯ್ಯ ಜಗತ್ತಿನಲ್ಲಿ ಬಹುತೇಕ ಎಲ್ಲ ಕಡೆ ವಾತಾವರಣ ಬದಲಾಗಿದೆ ಎಂದರು.

ಜೆಡಿಎಸ್ ಬಿಜೆಪಿ ಒಂದಾಗೋದು ಗೊತ್ತಿಲ್ಲ. ಅವರಿಬ್ಬರೂ ಮಾತುಕಥೆ ನಡೆಸ್ತಿದಾರೆ ಎಂದ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ನಾವು 15 ರಿಂದ 20 ಸ್ಥಾನ ಗೆಲ್ತೀವಿ -ಅವರು ಒಂದಾದರೂ ಗೆಲ್ತೀವಿ, ಅವರು ಒಂದಾಗದೆ ಇದ್ರೂ ಗೆಲ್ತೀವಿ ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ಹೇಳಿದರು.

Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು