ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಚೈತ್ರಾ ಕುಂದಾಪುರಳನ್ನು ಸ್ಟಾರ್ ಪ್ರಚಾರಕಿಯಾಗಿ ಬಳಿಸಿತ್ತು: ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2023 | 4:23 PM

ಸಿಟಿ ರವಿ, ಚೈತ್ರಾ ಮತ್ತು ಬಿಜೆಪಿ ನಡುವೆ ಸಂಬಂಧವಿಲ್ಲ ಅಂತ ಹೇಳುತ್ತಾರೆ, ಈಗ ಹೇಳಿದರೇನು ಬಂತು? ಪ್ರಚಾರಕ್ಕಾಗಿ ಅಕೆಯನ್ನು ಬಳಸಿಕೊಳ್ಳುವಾಗ ಗೊತ್ತಾಗಲಿಲ್ಲವೇ? ಬಿಜೆಪಿ ನಾಯಕರೇ ಹಾಗೆ; ಮೊದಲು ಬಳಸಿಕೊಳ್ಳುತ್ತಾರೆ ನಂತರ ಇಂಥ ಘಟನೆ ಬಳಕಿಗೆ ಬಂದಾಗ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಅನ್ನುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಚೈತ್ರಾ ಕುಂದಾಪುರ (Chaitra Kundapura) ಇಂದಿರಾ ಕಾಂಟೀನ್ ಬಿಲ್ ಗೆ ಸಂಬಂಧಿಸಿದಂತೆ ಷಡ್ಯಂತ್ರ ರಚಿಸಲಾಗಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಆ ವಿಷಯವೆಲ್ಲ ಗೊತ್ತಿಲ್ಲ, ಎಫ್ ಐಆರ್ ನಲ್ಲಿ ಇರೋದು ಮಾತ್ರ ಗೊತ್ತು ಅಂತ ಹೇಳಿದರು. ಚುನಾವಣೆಗೆ ಟಿಕೆಟ್ ಮಾರಾಟ ಮಾಡುವವರಿಗೆ, ಮೋಸ ಮಾಡುವವರಿಗೆ ಕುಮಾರ ಕೃಪಾದಿಂದಲೇ (Kumara Krupa) ಕಾರ್ಯಾಚರಣೆ ನಡೆಸುವ ಅವಕಾಶ ಹೇಗೆ ಸಿಕ್ಕಿತು ಅಂತ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ವಿಧಾ ಸಭಾ ಚುನಾವಣೆಯಲ್ಲಿ ಬಿಜೆಪಿ ಚೈತ್ರಾಳಂಥವರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಂಡಿತು, ಆರಗ ಜ್ಞಾನೇಂದ್ರ ಅವರ ಕ್ಷೇತ್ರ, ಶೃಂಗೇರಿಯಲ್ಲಿ ಚೈತ್ರಾ ಪ್ರಚಾರ ಮಾಡಿದ್ದಾಳೆ ಎಂದರು. ಸಿಟಿ ರವಿ, ಚೈತ್ರಾ ಮತ್ತು ಬಿಜೆಪಿ ನಡುವೆ ಸಂಬಂಧವಿಲ್ಲ ಅಂತ ಹೇಳುತ್ತಾರೆ, ಈಗ ಹೇಳಿದರೇನು ಬಂತು? ಪ್ರಚಾರಕ್ಕಾಗಿ ಅಕೆಯನ್ನು ಬಳಸಿಕೊಳ್ಳುವಾಗ ಗೊತ್ತಾಗಲಿಲ್ಲವೇ? ಬಿಜೆಪಿ ನಾಯಕರೇ ಹಾಗೆ; ಮೊದಲು ಬಳಸಿಕೊಳ್ಳುತ್ತಾರೆ ನಂತರ ಇಂಥ ಘಟನೆ ಬಳಕಿಗೆ ಬಂದಾಗ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಅನ್ನುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.