ಜೈಲು ಸೇರಿದ ಪ್ರಕರಣ; ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್​ ಕಾಲೆಳೆದ ಗರ್ಲ್ಸ್

Updated on: Apr 12, 2025 | 10:47 AM

‘ಬಾಯ್ಸ್ vs ಗರ್ಲ್ಸ್’ ವೇದಿಕೆ ಬಳಿಕ ಮಾಡಿದ ರೀಲ್ಸ್ ಪ್ರಕರಣದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು ರಜತ್ ಹಾಗೂ ವಿನಯ್. ಇದರಿಂದ ಅವರು ಜೈಲು ಕೂಡ ಸೇರಿದ್ದರು. ಈಗ ಈ ಪ್ರಕರಣದ ಬಗ್ಗೆ ಅವರಿಗೆ ವೇದಿಕೆ ಮೇಲೆ ಟಾಂಗ್ ಕೊಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ರಜತ್ ಹಾಗೂ ವಿನಯ್ (Vinay Gowda) ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಹೀಗಾಗಿ, ಎಲ್ಲಾ ಮಾಧ್ಯಮಗಳಲ್ಲಿ ಅವರದ್ದೇ ಸುದ್ದಿ ಬಂದಿತ್ತು. ಈ ವಿಚಾರ ಇಟ್ಟುಕೊಂಡು ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ಮಾತನಾಡಲಾಗಿದೆ. ಹುಡುಗಿಯರ ಗ್ಯಾಂಗ್ ರಜತ್ ಹಾಗೂ ವಿನಯ್ ಕಾಲೆಳೆದಿದ್ದಾರೆ. ‘ಒಂದು ಆನೆ ಇತ್ತು, ಅದು ಚಾಕು ಹಿಡಿದು ಮನೆಯಲ್ಲಿ ಈರುಳ್ಳಿ ಕಟ್ ಮಾಡ್ತಾ ಇದೆ. ಅವನ ಅಣ್ಣ ರಜತ್ ಕಲರ್ಸ್​ ಅವರು ಕಂಟೆಂಟ್ ಕೊಡಲ್ಲ ಎಂದು ಇರೋಬರ ಚಾನೆಲ್​ಗೆ ಕಂಟೆಂಟ್ ಕೊಟ್ಟಿದಾನೆ’ ಎಂದು ಗರ್ಲ್ಸ್ ಗ್ಯಾಂಗ್ ಟ್ರೋಲ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Apr 12, 2025 10:41 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More