Violence in Hoskote; ಹೊಸಕೋಟೆ ಕ್ಷೇತ್ರದಲ್ಲಿ ಡಾ ಅಂಬೇಡ್ಕರ್ ಪುತ್ಥಳಿಗೆ ಬೆಂಕಿಯಿಟ್ಟರೂ ಕಾಂಗ್ರೆಸ್ ನಾಯಕರು ಭೇಟಿ ನೀಡಿಲ್ಲ: ನಳಿನ್ ಕುಮಾರ್ ಕಟೀಲ್

|

Updated on: May 16, 2023 | 2:21 PM

ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಸ್ಥಳಕ್ಕೆ ಇನ್ನೂ ಭೇಟಿ ನೀಡದಿರುವುದು ಅವರೆಲ್ಲ ದಲಿತ ವಿರೋಧಿಗಳು ಅನ್ನೋದನ್ನು ಸಾಬೀತು ಮಾಡುತ್ತದೆ ಎಂದು ಕಟೀಲ್ ಹೇಳಿದರು.

ದೇವನಹಳ್ಳಿ: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಿಂಸಾಚಾರದ (violence) ಘಟನೆ ನಡೆದಿದ್ದು ತಾಲ್ಲೂಕಿನ ಬಿ ಶೆಟ್ಟಿಹಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ಎನ್ನಲಾಗಿರುವ ಕೃಷ್ಣಪ್ಪ (Krishnappa) ಹೆಸರಿನ ವ್ಯಕ್ತಿಯ ಕೊಲೆಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಡಾ ಸಿಎನ್ ಅಶ್ವಥ್ ನಾರಾಯಣ, ಕೆಎಸ್ ಈಶ್ವರಪ್ಪ ಮೊದಲಾದ ನಾಯಕರು ಕೃಷ್ಣಪ್ಪನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇದೇ ಕ್ಷೇತ್ರದ ಗ್ರಾಮವೊಂದರಲ್ಲಿ ಕಿಡಿಗೇಡಿಗಳು ಡಾ ಬಿಅರ್ ಅಂಬೇಡ್ಕರ್ ಪುತ್ಥಳಿಗೆ ಬೆಂಕಿಯಿಟ್ಟಿದ್ದಾರೆ. ಈ ಘಟನೆಗಳನ್ನು ತೀವ್ರವಾಗಿ ಖಂಡಿಸಿರುವ ನಳಿನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವ ಮೊದಲೇ ಕಾಂಗ್ರೆಸ್ ನಾಯಕರ ತಲೆಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಅಂಬೇಡ್ಕರ್ ಅವರನ್ನು ಗೌರವಿಸಿ ಆರಾಧಿಸುತ್ತೇವೆ ಎಂದು ಹೇಳುವ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮೊದಲಾದವರು ಸ್ಥಳಕ್ಕೆ ಇನ್ನೂ ಭೇಟಿ ನೀಡದಿರುವುದು ಅವರೆಲ್ಲ ದಲಿತ ವಿರೋಧಿಗಳು ಅನ್ನೋದನ್ನು ಸಾಬೀತು ಮಾಡುತ್ತದೆ ಎಂದು ಕಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ