ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ

Updated on: Nov 13, 2023 | 1:35 PM

ಇವತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ನೇರವಾಗಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡರ ಮನೆಗೆ ತೆರಳಿ ಹಿರಿಯ ನಾಯಕನಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ವಿಜಯೇಂದ್ರ ಮಾಜಿ ಪ್ರಧಾನ ಮಂತ್ರಿಯವರ ಮನೆಗೆ ಬಂದಾಗ ಹಾಸನ ಸಂಸದ ಮತ್ತು ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅಲ್ಲೇ ಇದ್ದರು.

ಬೆಂಗಳೂರು: ಬಿಜೆಪಿ ರಾಜ್ಯ ಘಟಕ ಹೊಸ ಮತ್ತು ಯುವ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಮಯ ವ್ಯರ್ಥ ಮಾಡುವ ಆಸಾಮಿ ಅಲ್ಲ ಅಂತ ಕನ್ನಡಿಗರಿಗೆ ಅನಿಸುತ್ತಿದೆ. ಮಾತಿಗಿಂತ ಕೃತಿ ಲೇಸು ಅಂತ ಹೇಳ್ತಾರಲ್ಲ ಕನ್ನಡದಲ್ಲಿ, ಅದನ್ನು ಅವರು ದ್ಯೇಯವಾಕ್ಯ ಮಾಡಿಕೊಂಡಂತಿದೆ. ಇವತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ನೇರವಾಗಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡರ (HD Devegowda) ಮನೆಗೆ ತೆರಳಿ ಹಿರಿಯ ನಾಯಕನಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ವಿಜಯೇಂದ್ರ ಮಾಜಿ ಪ್ರಧಾನ ಮಂತ್ರಿಯವರ ಮನೆಗೆ ಬಂದಾಗ ಹಾಸನ ಸಂಸದ ಮತ್ತು ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ (Prajwal Revanna) ಅಲ್ಲೇ ಇದ್ದರು. ದೇವೇಗೌಡರ ಪರವಾಗಿ ವಿಜಯೇಂದ್ರರನ್ನು ಪ್ರಜ್ವಲ್ ಸನ್ಮಾನಿಸುತ್ತಿರುವುದು ದೃಶ್ಯಗಳಲ್ಲಿ ನೋಡಬಹುದು. ವಿಜಯೇಂದ್ರಗೆ ಶಾಲು ಹೊದೆಸಿ, ಹಾರ ಹಾಕಿ ಅಭಿನಂದಿಸಲಾಯಿತು. ನಂತರ ಬಿಜೆಪಿ ನಾಯಕ ಸಹ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಿಗೆ ಬೋಕೆ ನೀಡಿ ಗೌರವಿಸುತ್ತಾರೆ. ಲೋಕ ಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ವಿಜಯೇಂದ್ರ ದೇವೇಗೌಡರನ್ನು ಭೇಟಿಯಾಗಿದ್ದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.