ಪದಗ್ರಹಣಕ್ಕಾಗಿ ತೆರಳುವ ಮೊದಲು ಕಾರ್ಯಕರ್ತರು ಮತ್ತು ಮಾಧ್ಯಮಗಳ ನೆರವು ಕೋರಿದ ಬಿವೈ ವಿಜಯೇಂದ್ರ

|

Updated on: Nov 15, 2023 | 11:23 AM

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರ ಜೊತೆ ಮಾಧ್ಯಮದವರ ಸಹಕಾರ ಕೂಡ ಬೇಕೆಂದು ವಿಜಯೇಂದ್ರ ಹೇಳಿದರು. ಆವರು ಮಾತಾಡುವಾಗ ಮಾಜಿ ಸಚಿ ಪ್ರಭು ಚೌಹಾನ್ ಕೆಮೆರಾದ ಫ್ರೇಮಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ದೃಶ್ಯ ಹಾಸ್ಯಾಸ್ಪದವಾಗಿ ಕಂಡಿತು.

ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಎಸ್ ಯಡಿಯೂರಪ್ಪರ (BS Yediyurappa) ಪುತ್ರ ಬಿವೈ ವಿಜಯೇಂದ್ರ (BY Vijayendra) ಅವರು ಇಂದು ನಗರದ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಗೆ (BJP office) ತೆರಳುವ ಮೊದಲು ಮಾಧ್ಯಮದವರ ನೆರವು ಕೋರಿದರು. ಯಡಿಯೂರಪ್ಪನವರ ಮನೆ ಹೊರಗಡೆ ಅವರ ಬೈಟ್ ಗಾಗಿ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಜಯೇಂದ್ರ, ಪಕ್ಷದ ರಾಷ್ಟ್ರೀಯ ನಾಯಕರು, ಹಿರಿಯರ ಅಣತಿಯ ಮೇರೆಗೆ ಪಕ್ಷದ ರಾಜ್ಯಾಧ್ಯಕ್ಷನ ಜವಾಬ್ದಾರಿ ಹೊತ್ತುಕೊಳ್ಳಲು ತಯಾರಾಗಿರುವುದಾಗಿ ಹೇಳಿದ ಅವರು ಇದುವೆರೆಗೆ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಿದ ನಳಿನ್ ಕುಮಾರ್ ಕಟೀಲ್ ಅವರಿಂದ ಅಧಿಕಾರವಹಿಸಿಕೊಳ್ಳಲು ಬಿಜೆಪಿ ಕಚೇರಿಗೆ ತೆರಳುತ್ತಿರುವುದಾಗಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರ ಜೊತೆ ಮಾಧ್ಯಮದವರ ಸಹಕಾರ ಕೂಡ ಬೇಕೆಂದು ವಿಜಯೇಂದ್ರ ಹೇಳಿದರು. ಆವರು ಮಾತಾಡುವಾಗ ಮಾಜಿ ಸಚಿ ಪ್ರಭು ಚೌಹಾನ್ ಕೆಮೆರಾದ ಫ್ರೇಮಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ದೃಶ್ಯ ಹಾಸ್ಯಾಸ್ಪದವಾಗಿ ಕಂಡಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ