Video: ಐಸಿಯು ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯ ಮೇಲೆ ಹಲ್ಲೆ ನಡೆಸಿದ ವೈದ್ಯ

Updated on: Apr 17, 2026 | 7:35 AM

ಹರಿಯಾಣ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸಿಯು (ICU) ವಾರ್ಡ್‌ನಲ್ಲಿ ನಡೆದ ದೃಶ್ಯವೊಂದು ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಚಿಕಿತ್ಸೆ ನೀಡಬೇಕಾದ ಕೈಗಳೇ ವೃದ್ಧ ರೋಗಿಯ ಎದೆಯನ್ನು ಅಪ್ಪಳಿಸಿರುವ ಆಘಾತಕಾರಿ ವಿಡಿಯೋ ಈಗ ಬಹಿರಂಗಗೊಂಡಿದೆ. ವೈದ್ಯರೊಬ್ಬರು ವೃದ್ಧ ರೋಗಿಯಿದ್ದ ಹಾಸಿಗೆಯ ಬಳಿ ಬಂದು ಮೊದಲು ಸುತ್ತಲೂ ಕಣ್ಗಾವಲು ಕ್ಯಾಮೆರಾ ಎಲ್ಲಿವೆ ಎಂದು ಗಮನಿಸುತ್ತಾನೆ. ನಂತರ ಯಾರಿಗೂ ಕಾಣದಂತೆ ಹಾಸಿಗೆಯ ಸುತ್ತಲಿನ ಪರದೆಗಳನ್ನು (Curtains) ಎಳೆದು, ಹಾಸಿಗೆಯ ಮೇಲಿದ್ದ ಅಸಹಾಯಕ ವೃದ್ಧ ರೋಗಿಯ ಎದೆಗೆ ತನ್ನ ಮೊಣಕೈಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ. ವೃದ್ಧ ರೋಗಿಯು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಆತನನ್ನು ಆರೈಕೆ ಮಾಡಬೇಕಾದ ವೈದ್ಯನು ತನ್ನ ಕೋಪವನ್ನು ಅಥವಾ ವಿಕೃತಿಯನ್ನು ರೋಗಿಯ ಮೇಲೆ ತೀರಿಸಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಚಂಡೀಗಢ, ಏಪ್ರಿಲ್ 17: ಹರಿಯಾಣ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸಿಯು (ICU) ವಾರ್ಡ್‌ನಲ್ಲಿ ನಡೆದ ದೃಶ್ಯವೊಂದು ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಚಿಕಿತ್ಸೆ ನೀಡಬೇಕಾದ ಕೈಗಳೇ ವೃದ್ಧ ರೋಗಿಯ ಎದೆಯನ್ನು ಅಪ್ಪಳಿಸಿರುವ ಆಘಾತಕಾರಿ ವಿಡಿಯೋ ಈಗ ಬಹಿರಂಗಗೊಂಡಿದೆ. ವೈದ್ಯರೊಬ್ಬರು ವೃದ್ಧ ರೋಗಿಯಿದ್ದ ಹಾಸಿಗೆಯ ಬಳಿ ಬಂದು ಮೊದಲು ಸುತ್ತಲೂ ಕಣ್ಗಾವಲು ಕ್ಯಾಮೆರಾ ಎಲ್ಲಿವೆ ಎಂದು ಗಮನಿಸುತ್ತಾನೆ. ನಂತರ ಯಾರಿಗೂ ಕಾಣದಂತೆ ಹಾಸಿಗೆಯ ಸುತ್ತಲಿನ ಪರದೆಗಳನ್ನು (Curtains) ಎಳೆದು, ಹಾಸಿಗೆಯ ಮೇಲಿದ್ದ ಅಸಹಾಯಕ ವೃದ್ಧ ರೋಗಿಯ ಎದೆಗೆ ತನ್ನ ಮೊಣಕೈಯಿಂದ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ. ವೃದ್ಧ ರೋಗಿಯು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಆತನನ್ನು ಆರೈಕೆ ಮಾಡಬೇಕಾದ ವೈದ್ಯನು ತನ್ನ ಕೋಪವನ್ನು ಅಥವಾ ವಿಕೃತಿಯನ್ನು ರೋಗಿಯ ಮೇಲೆ ತೀರಿಸಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More