Video: ದೆಹಲಿ ನಿಗೂಢ ಸ್ಫೋಟ: ಕಾರಿನಲ್ಲಿ ಕುಳಿತವ 3 ತಾಸುಗಳಲ್ಲಿ ಒಮ್ಮೆಯೂ ಕೆಳಗಿಳಿದಿರಲಿಲ್ಲ

Updated on: Nov 11, 2025 | 9:35 AM

ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡಿದ್ದ ಕಾರು 3 ಗಂಟೆಗಳ ಕಾಲ ಆ ಸ್ಥಳದಲ್ಲಿದ್ದರೂ ಒಮ್ಮೆಯೂ ಚಾಲಕ ಕಾರಿನಿಂದ ಕೆಳಗಿಳಿದಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದು, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿದ್ದು, ಸಂಜೆ 6.30 ರವರೆಗೆ ಅಲ್ಲಿಯೇ ನಿಂತಿತ್ತು ಎಂದು ತಿಳಿದುಬಂದಿದೆ.

ನವದೆಹಲಿ, ನವೆಂಬರ್ 11: ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡಿದ್ದ ಕಾರು 3 ಗಂಟೆಗಳ ಕಾಲ ಆ ಸ್ಥಳದಲ್ಲಿದ್ದರೂ ಒಮ್ಮೆಯೂ ಚಾಲಕ ಕಾರಿನಿಂದ ಕೆಳಗಿಳಿದಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದು, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ HR 26CE7674 ನಂಬರ್ ಪ್ಲೇಟ್ ಹೊಂದಿರುವ ಕಾರು ಮಧ್ಯಾಹ್ನ 3.19 ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸಿದ್ದು, ಸಂಜೆ 6.30 ರವರೆಗೆ ಅಲ್ಲಿಯೇ ನಿಂತಿತ್ತು ಎಂದು ತಿಳಿದುಬಂದಿದೆ.

ಪೊಲೀಸರು ಒಂದು ನಿಮಿಷದ ಸಿಸಿಟಿವಿ ವಿಡಿಯೋವನ್ನು ಪಡೆದುಕೊಂಡಿದ್ದಾರೆ, ಅದು ಕಾರು ಬದರ್ಪುರ್ ಗಡಿಯ ಮೂಲಕ ಹಾದುಹೋಗುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೊಂದು ವೀಡಿಯೊದಲ್ಲಿ ಚಾಲಕನ ಕೈ ಕಿಟಕಿಯಿಂದ ಹೊರಗೆ ಚಾಚಿರುವುದನ್ನು ತೋರಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ