Video: ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಪ್ಲಾಟ್‌ಫಾರ್ಮ್‌ನಿಂದ ಹಳಿ ಮೇಲೆ ಬಿದ್ದ ಯುವತಿ!

ನಿಂತಿದ್ದ ರೈಲಿನಿಂದ ಯುವತಿಯೊಬ್ಬಳು ಇಳಿದು ಪ್ಲಾಟ್‌ಫಾರ್ಮ್‌ನಲ್ಲಿದ್ದ ಅಂಗಡಿಯಿಂದ ತಿಂಡಿ ಖರೀದಿಸಲು ಹೋಗಿರುವುದನ್ನು ಕಾಣಬಹುದು. ಕೆಲ ಕ್ಷಣದಲ್ಲೇ ರೈಲು ಚಲಿಸುತ್ತಿದ್ದಂತೆ ಯುವತಿ ಓಡಿ ಹೋಗಿ ರೈಲು ಹತ್ತಲು ಯತ್ನಿಸಿ ಹಳಿಗಳ ಮೇಲೆ ಬಿದ್ದಿದ್ದಾಳೆ. ಸದ್ಯ ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶ: ಯುವತಿಯೊಬ್ಬಳು ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಪ್ಲಾಟ್‌ಫಾರ್ಮ್‌ನಿಂದ ಹಳಿ ಮೇಲೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದೆ. ನಿಂತಿದ್ದ ರೈಲಿನಿಂದ ಯುವತಿಯೊಬ್ಬಳು ಇಳಿದು ತಿಂಡಿ ಖರೀದಿಸಲು ಹೋಗಿದ್ದಳು. ಆದರೆ ರೈಲು ಚಲಿಸುತ್ತಿದ್ದಂತೆ ಓಡಿ ಹೋಗಿ ರೈಲು ಹತ್ತಲು ಯತ್ನಿಸಿ ಹಳಿಗಳ ಮೇಲೆ ಬಿದ್ದಿದ್ದಾಳೆ. ಅಪಘಾತದಲ್ಲಿ ಆಕೆಗೆ ಸ್ವಲ್ಪ ಗಾಯವಾಗಿದ್ದು, ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ವಿಡಿಯೋ ಒಂದು ಕ್ಷಣ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ.

ಇದನ್ನೂ ಓದಿ: Viral: ಇದೇನ್‌ ಹುಚ್ಚಾಟ…. ಹುಲಿ ಬಾಯಿಯೊಳಗೆ ಕೈ ಹಾಕಿದ ಯುವಕ; ವಿಡಿಯೋ ವೈರಲ್‌

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us