ಚಾಮರಾಜನಗರ: ಮದ್ವೆಯಲ್ಲೂ ಮೋದಿ ಪರ ಪ್ರಚಾರ ಮಾಡಿ ಅಭಿಮಾನ ಮೆರೆದ ಬಿಜೆಪಿ ಕಾರ್ಯಕರ್ತ; ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2024 | 8:49 PM

ಚಾಮರಾಜನಗರದ ಮಾಂಗಲ್ಯ ಕನ್ವೆನ್ಷನ್ ಹಾಲ್​ನಲ್ಲಿ ನಿನ್ನೆ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿರಾಟ್‌ಶಿವು ಹಾಗೂ ಚೈತ್ರ ಎಂಬುವವರ ವಿವಾಹದಲ್ಲಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ ಅವರನ್ನು ಬೆಂಬಲಿಸಿ ಎಂಬ ಘೋಷವಾಕ್ಯದೊಂದಿಗೆ ದೇಶದ ಭವ್ಯ ಭವಿಷ್ಯಕ್ಕೆ ಮತ್ತೊಮ್ಮೆ ಮೋದಿ ಬೆಂಬಲಿಸಿ ಎಂಬ ಪ್ರಧಾನಿಯ ಪ್ಲೇಕಾರ್ಡ್ ಗಿಫ್ಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಜೊತೆಗೆ ಎಲ್​ಇಡಿ ಪರದೆಯಲ್ಲೂ ನರೇಂದ್ರ ಮೋದಿ ಅವರ ಭಾವಚಿತ್ರ ಬಳಕೆ ಮಾಡಿದ್ದಾರೆ.

ಚಾಮರಾಜನಗರ, ಫೆ.02: ಬಿಜೆಪಿ ಕಾರ್ಯಕರ್ತ(BJP Worker)ನೊಬ್ಬ ತನ್ನ ಮದುವೆಯಲ್ಲೂ ಪ್ರಧಾನಿ ಮೋದಿ ಪರ ಪ್ರಚಾರ ಮಾಡಿ ಸ್ವಾಮಿ ನಿಷ್ಠೆ ಮೆರೆದಿದ್ದಾನೆ. ಮದುವೆ ಆಹ್ವಾನಿತರಿಗೆ ನರೇಂದ್ರ ಮೋದಿ ಅವರ ಭಾವಚಿತ್ರ ನೀಡಿ ಮತ್ತೊಮ್ಮೆ ಮೋದಿ ಗೆಲ್ಲಿಸಿ ಎಂದು ವಧು-ವರ ಮನವಿ ಮಾಡಿದ್ದಾರೆ. ಚಾಮರಾಜನಗರ(Chamarajanagara)ದ ಮಾಂಗಲ್ಯ ಕನ್ವೆನ್ಷನ್ ಹಾಲ್​ನಲ್ಲಿ ನಿನ್ನೆ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿರಾಟ್‌ಶಿವು ಹಾಗೂ ಚೈತ್ರ ಅವರ ವಿವಾಹದಲ್ಲಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ ಅವರನ್ನು ಬೆಂಬಲಿಸಿ ಎಂಬ ಘೋಷವಾಕ್ಯದೊಂದಿಗೆ ದೇಶದ ಭವ್ಯ ಭವಿಷ್ಯಕ್ಕೆ ಮತ್ತೊಮ್ಮೆ ಮೋದಿ ಬೆಂಬಲಿಸಿ ಎಂಬ ಪ್ರಧಾನಿಯ ಪ್ಲೇಕಾರ್ಡ್ ಗಿಫ್ಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಜೊತೆಗೆ ಎಲ್​ಇಡಿ ಪರದೆಯಲ್ಲೂ ನರೇಂದ್ರ ಮೋದಿ ಅವರ ಭಾವಚಿತ್ರ ಬಳಕೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More