Hearse van: ದುಸ್ಥಿತಿಯಲ್ಲಿರುವ ಚಿಕ್ಕಮಗಳೂರು ನಗರಸಭೆ ಶಾಂತಿವಾಹನವನ್ನು ಮೃತರ ಸಂಬಂಧಿಕರು ಮುಕ್ತಿಧಾಮದವರೆಗೆ ತಳ್ಳಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 13, 2023 | 12:06 PM

ಪಾರ್ಥೀವ ಶರೀರ ಸಾಗಿಸುವಾಗ ಶಾಂತಿವಾಹನವನ್ನು ತಳ್ಳಿದರೂ ಸ್ಟಾರ್ಟ್ ಆಗದ ಕಾರಣ ಅದನ್ನು ತಳ್ಳಿದ ಕುಟುಂಬದ ಸದಸ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಕಕ್ತಪಡಿಸುತ್ತಿದ್ದಾರೆ.

ಚಿಕ್ಕಮಗಳೂರು: ಶವಸಂಸ್ಕಾರದ (funereal ceremony) ವೇಳೆಯಲ್ಲಿ ಇಂಥ ಸಂಗತಿಗಳು ಸಾಮಾನ್ಯವಾಗಿ ಘಟಿಸುವುದಿಲ್ಲ. ಆದರೆ, ನಗರದ ಶಂಕರಪುರದಲ್ಲಿ ಪಾರ್ಥೀವ ಶರೀರವೊಂದನ್ನು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ರುದ್ರಭೂಮಿಗೆ (graveyard) ಸಾಗಿಸುವಾಗ ಶಾಂತಿವಾಹನ ಕೆಟ್ಟುನಿಂತಿದೆ. ವಿಧಿಹಿಲ್ಲದೆ ಮೃತರ ಸಂಬಂಧಿಕರು ವಾಹನವನ್ನು ತಳ್ಳಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ನಗರಸಭೆಗೆ ಸೇರಿದ ಶಾಂತಿವಾಹನ ಎಂಜಿನ್ ನಲ್ಲಿ ಸ್ಟಾರ್ಟಿಂಗ್ ಸಮಸ್ಯೆ (starting trouble) ಇದೆ. ಅದನ್ನು ಸ್ಟಾರ್ಟ್ ಮಾಡಬೇಕಾದರೆ ತಳ್ಳಲೇಬೇಕು. ಆದರೆ ಪಾರ್ಥೀವ ಶರೀರ ಸಾಗಿಸುವಾಗ ಅದು ತಳ್ಳಿದರೂ ಸ್ಟಾರ್ಟ್ ಆಗದ ಕಾರಣ ಅದನ್ನು ತಳ್ಳಿದ ಕುಟುಂಬದ ಸದಸ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಕಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 13, 2023 12:06 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.