ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ, 40 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

Updated on: Aug 24, 2026 | 2:39 PM

ಮಹಾರಾಷ್ಟ್ರದ ನಾಗ್ಪುರದ ಗೋಧ್ನಿ ಪ್ರದೇಶದ ನೀರು ಸಂಸ್ಕರಣಾ ಘಟಕದಲ್ಲಿ ಸೋಮವಾರ ಮುಂಜಾನೆ 900 ಕೆಜಿ ಸಾಮರ್ಥ್ಯದ ಸಿಲಿಂಡರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿ ಭಾರಿ ಆತಂಕ ಸೃಷ್ಟಿಸಿದೆ. ವಿಷಕಾರಿ ಅನಿಲ ಸೇವಿಸಿ ತೀವ್ರ ಉಸಿರಾಟದ ತೊಂದರೆ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ 40 ಕ್ಕೂ ಹೆಚ್ಚು ಜನರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಗ್ಪುರ, ಆಗಸ್ಟ್​ 24: ಮಹಾರಾಷ್ಟ್ರದ ನಾಗ್ಪುರದ ಗೋಧ್ನಿ ಪ್ರದೇಶದ ನೀರು ಸಂಸ್ಕರಣಾ ಘಟಕದಲ್ಲಿ ಸೋಮವಾರ ಮುಂಜಾನೆ 900 ಕೆಜಿ ಸಾಮರ್ಥ್ಯದ ಸಿಲಿಂಡರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿ ಭಾರಿ ಆತಂಕ ಸೃಷ್ಟಿಸಿದೆ. ವಿಷಕಾರಿ ಅನಿಲ ಸೇವಿಸಿ ತೀವ್ರ ಉಸಿರಾಟದ ತೊಂದರೆ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ 40 ಕ್ಕೂ ಹೆಚ್ಚು ಜನರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯರಾತ್ರಿಯ ಕಾರ್ಯಾಚರಣೆ: ಮುಂಜಾನೆ 1 ಗಂಟೆಗೆ ಸೋರಿಕೆ ಆರಂಭವಾಗಿದ್ದು, ಎನ್​ಡಿಆರ್​ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಸುಮಾರು ನಾಲ್ಕೂವರೆ ಗಂಟೆಗಳ ಸತತ ಕಾರ್ಯಾಚರಣೆಯ ನಂತರ, 900 ಕೆಜಿ ಸಿಲಿಂಡರ್ ಅನ್ನು ಕಾಸ್ಟಿಕ್ ಸೋಡಾ ದ್ರಾವಣದ ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಅನಿಲವನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಯಿತು.

ಕ್ಲೋರಿನ್ ಅನಿಲವು ಶ್ವಾಸಕೋಶದ ಒಳಪದರಕ್ಕೆ ನೇರ ಹಾನಿ ಉಂಟುಮಾಡುತ್ತದೆ. ಇತ್ತೀಚೆಗೆ ಯುಪಿಯ ಮಾಂಸ ಸಂಸ್ಕರಣಾ ಘಟಕದಲ್ಲೂ ಅಮೋನಿಯಾ ಸೋರಿಕೆಯಾಗಿತ್ತು. ಕೈಗಾರಿಕಾ ಅನಿಲ ಸೋರಿಕೆಗಳ ತುರ್ತು ನಿಗ್ರಹಕ್ಕೆ ಆಸ್ಪತ್ರೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಸದಾ ಮುನ್ನೆಚ್ಚರಿಕೆಯ ಉಪಕರಣಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More