Video: ಡೌಟ್ ಕೇಳೋ ನೆಪದಲ್ಲಿ ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವಿಡಿಯೋ ಫುಲ್ ವೈರಲ್

Updated on: Apr 01, 2026 | 4:24 PM

ತಮಿಳುನಾಡಿನ ಕೊಯಮತ್ತೂರಿನ ಕಚೇರಿಯೊಂದರಲ್ಲಿ ಮಹಿಳಾ ಉದ್ಯೋಗಿಗೆ ಸಹೋದ್ಯೋಗಿ ಮುತ್ತಿಕ್ಕಲು ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನುಮಾನ ಕೇಳುವ ನೆಪದಲ್ಲಿ ಬಂದ ಆತ, ಏಕಾಏಕಿ ಮಹಿಳೆಯ ತುಟಿಗೆ ಚುಂಬಿಸಲು ಮುಂದಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡು: ಕಛೇರಿಯಲ್ಲೇ ಡೌಟ್​ ಕೇಳೋ ನೆಪದಲ್ಲಿ ಬಂದು ಮಹಿಳಾ ಉದ್ಯೋಗಿಗೆ ತುಟಿಗೆ ಚುಂಬಿಸಲು ಮುಂದಾದ ಘಟನೆ ತಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿದೆ. ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. @rameshofficial0 ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮಹಿಳೆ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಪುರುಷ ಸಹೋದ್ಯೋಗಿ ಕಂಪ್ಯೂಟರ್‌ನಲ್ಲಿ ಏನೋ ತೋರಿಸುತ್ತಾ ಏಕಾಏಕಿ ಆಕೆಯ ತುಟಿಗೆ ಚುಂಬಿಸಲು ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

 

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 01, 2026 04:23 PM
Follow Us
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More