Tumakuru: ಮೂಢನಂಬಿಕೆಗೊಳಗಾಗಿ ಡಿವೋರ್ಸ್ ಗೆ ಮುಂದಾಗಿದ್ದ ದಂಪತಿಯನ್ನು ಒಂದುಗೂಡಿಸಿದ ಚಿಕ್ಕನಾಯಕನಹಳ್ಳಿ ಕೋರ್ಟ್!

ಅರುಣ್​ ಕುಮಾರ್​ ಬೆಳ್ಳಿ

Updated on: Feb 01, 2023 | 3:00 PM

ನ್ಯಾಯಾಲಯದಲ್ಲೇ ದಂಪತಿ ಮತ್ತೊಮ್ಮೆ ಹಾರ ವಿನಿಮಯ ಮಾಡಿಕೊಂಡರು ಮತ್ತು ನ್ಯಾಯಾಧೀಶರು ಹಾಗೂ ವಕೀಲರು ಅವರಿಗೆ ಸಿಹಿ ತಿನ್ನಿಸಿದರು.

ತುಮಕೂರು:  ಇದೊಂದು ಅಪರೂಪದ ಮತ್ತು ಮನಸ್ಸಿಗೆ ಮುದ ನೀಡುವ ಸನ್ನಿವೇಶ. ಸುಮಾರು 6 ವರ್ಷಗಳ ಹಿಂದೆ ಪಾರ್ವತಿಯನ್ನು (Parvathamma) ಮದುವೆಯಾಗಿದ್ದ ಮಂಜುನಾಥ (Manjunath) ಅದ್ಯಾವುದೋ ಮೂಢನಂಬಿಕೆಗೆ ಒಳಗಾಗಿ ಆಕೆಯನ್ನು ತ್ಯಜಿಸಲು ನಿರ್ಧರಿಸಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಸಿವಿಲ್ ಕೋರ್ಟ್ ನಲ್ಲಿ ಡಿವೋರ್ಸ್ ಗಾಗಿ ಅರ್ಜಿಯನ್ನೂ ಸಲ್ಲಿಸಿದ್ದ. ಆದರೆ ಸಿವಿಲ್ ಕೋರ್ಟ್ ನ್ಯಾಯಾಧೀಶರಾಗಿರುವ ವೆಂಕಟೇಶಪ್ಪನವರು (Venkateshappa), ಮಂಜುನಾಥನಿಗೆ ಬುದ್ಧಿವಾದ ಹೇಳಿ ಅವನ ಮನ ಪರಿವರ್ತನೆ ಮಾಡಿದ್ದಾರೆ. ಅವರ ಮಾತಿಗೆ ಮನ್ನಣೆ ನೀಡಿದ ಮಂಜುನಾಥ ಪುನಃ ಪಾರ್ವತಮ್ಮ ಜೊತೆ ಸಂಸಾರ ನಡೆಸುವ ಮತ್ತು ಮುಂದ್ಯಾವತ್ತೂ ಮೂಢನಂಬಿಕೆಗಳಿಗೆ ಒಳಗಾಗುವುದಿಲ್ಲ ಅಂತ ಪ್ರಮಾಣ ಮಾಡಿದ. ನ್ಯಾಯಾಲಯದಲ್ಲೇ ದಂಪತಿ ಮತ್ತೊಮ್ಮೆ ಹಾರ ವಿನಿಮಯ ಮಾಡಿಕೊಂಡರು ಮತ್ತು ನ್ಯಾಯಾಧೀಶರು ಹಾಗೂ ವಕೀಲರು ಅವರಿಗೆ ಸಿಹಿ ತಿನ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 01, 2023 02:59 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.