ಮದುವೆಗೆ ಟೆಂಪಲ್ ಹಾಗೂ ಗೋಲ್ಡ್​ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ

Updated on: Feb 14, 2025 | 10:36 AM

ಡಾಲಿ ಧನಂಜಯ್ ವಿವಾಹ ಬಂದೆ ಬಿಟ್ಟಿದೆ. ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಇವರ ವಿವಾಹ ಕಾರ್ಯ ಅದ್ದೂರಿಯಾಗಿ ನಡೆಯುತ್ತಿದೆ. ಈಗ ಧನಂಜಯ್ ಅವರ ವಿವಾಹ ಥೀಮ್ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಬಗ್ಗೆ ಅವರ ಕಾಸ್ಟ್ಯೂಮ್ ಡಿಸೈನರ್ ಶೆಚಿನ ಹೆಗ್ಗಾರ್ ಮಾತನಾಡಿದ್ದಾರೆ.

ನಟ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯಾತ ವಿವಾಹ ಫೆಬ್ರವರಿ 15 ಹಾಗೂ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಜರುಗಲಿದೆ. ಇವರ ವಿವಾಹಕ್ಕೆ ಯಾವ ರೀತಿಯ ಥೀಮ್ ಇರಲಿದೆ ಎಂಬುದನ್ನು ಡಿಸೈನರ್ ಶೆಚಿನ ಹೆಗ್ಗಾರ್ ವಿವರಿಸಿದ್ದಾರೆ. ‘ಮದುವೆ ಸೆಟ್​ ಟೆಂಪಲ್ ಥೀಮ್​ನಲ್ಲಿ ಇರಲಿದೆ. ವಿವಾಹಕ್ಕೆ ಗೋಲ್ಡನ್ ಥೀಮ್ ಮಾಡಲಾಗಿದೆ. ಇದು ಮುಹೂರ್ತಕ್ಕೆ. ಆರತಕ್ಷತೆಗೆ ಪ್ಯಾಲೆಸ್ ಥೀಮ್ ಇರಲಿದೆ. ದಕ್ಷಿಣದ ಥೀಮ್​ನಲ್ಲೇ ಎಲ್ಲವೂ ಇರಲಿದೆ’ ಎಂದಿದ್ದಾರೆ ಧನಂಜಯ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 14, 2025 08:45 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More