Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?

Updated on: Apr 27, 2025 | 7:15 AM

ಉಪವಾಸದ ಸಮಯದಲ್ಲಿ ನಿದ್ರೆ ಮಾಡುವುದರಿಂದಾಗುವ ಲಾಭ-ನಷ್ಟಗಳ ಬಗ್ಗೆ ವಿಡಿಯೋದಲ್ಲಿ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಉಪವಾಸ ಮಾಡುವಾಗ ಮನಸ್ಸು, ದೇಹ ಮತ್ತು ಇಂದ್ರಿಯಗಳು ಜಾಗೃತವಾಗಿರಬೇಕು. ಉಪವಾಸದಲ್ಲಿ ಸಮಯದಲ್ಲಿ ನಿದ್ರೆ ವ್ರತ ಭಂಗಕ್ಕೆ ಕಾರಣವಾಗುತ್ತದೆ. ಚಿಂತೆ, ಸಂಸಾರದ ವಿಷಯಗಳನ್ನು ಪ್ರಸ್ತಾಪ ಮಾಡದಿರುವುದು ಕೂಡ ಮುಖ್ಯ ಎಂದು ಹೇಳಲಾಗುತ್ತದೆ.

ಬೆಂಗಳೂರು, ಏಪ್ರಿಲ್​ 27: ಉಪವಾಸವು ಅನೇಕ ಧರ್ಮಗಳಲ್ಲಿ ಪ್ರಮುಖವಾದ ಆಚರಣೆಯಾಗಿದೆ. ಇದು ದೇವರನ್ನು ಆರಾಧಿಸುವ, ಭಕ್ತಿಯನ್ನು ಪ್ರದರ್ಶಿಸುವ ಒಂದು ಮಾರ್ಗ. ಆದರೆ, ಉಪವಾಸದ ಸಮಯದಲ್ಲಿ ನಿದ್ರೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಧರ್ಮಗ್ರಂಥಗಳ ಪ್ರಕಾರ, ಉಪವಾಸವು ಭಗವಂತನಿಗೆ ಹತ್ತಿರವಾಗುವ ಪ್ರಕ್ರಿಯೆ. ಈ ಸಮಯದಲ್ಲಿ ಮನಸ್ಸು, ದೇಹ ಮತ್ತು ಇಂದ್ರಿಯಗಳು ಜಾಗೃತವಾಗಿರಬೇಕು. ನಿದ್ರೆ ಮಾಡುವುದು ವ್ರತ ಭಂಗಕ್ಕೆ ಕಾರಣವಾಗಬಹುದು. ಈ ಬಗ್ಗೆ ವಿಡಿಯೋದಲ್ಲಿ ಗುರೂಜಿ ತಿಳಿಸಿಕೊಟ್ಟಿದ್ದಾರೆ ನೋಡಿ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More