Daily Devotional: ರಾತ್ರಿ ವೇಳೆ ನಾಯಿಗಳು ಊಳಿಡೋದರ ಅರ್ಥವೇನು?

Updated on: Apr 28, 2025 | 6:57 AM

ನಾಯಿಗಳ ಅಳು, ಕಿರುಚಾಟ, ಕೂಗುವುದು ಶಕುನವೆಂದು ಪರಿಗಣಿಸಲಾಗುತ್ತದೆ. ಪ್ರಯಾಣದ ಮುನ್ನ ನಾಯಿ ವಿಚಿತ್ರವಾಗಿ ವರ್ತಿಸಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನಿಂಬೆಹಣ್ಣು ಹಿಡಿದು ಪ್ರಯಾಣಿಸುವುದರಿಂದ ಕಂಟಕ ತಪ್ಪುತ್ತದೆ ಎಂಬ ನಂಬಿಕೆಯೂ ಇದೆ. ನಾಯಿಗಳು ಋಣಾತ್ಮಕ ಶಕ್ತಿಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ ಎಂಬ ನಂಬಿಕೆಯಿದೆ.

ಬೆಂಗಳೂರು, ಏಪ್ರಿಲ್ 28: ನಾಯಿ ಕೂಗುವುದು, ಅಳುವುದು ಅಥವಾ ಕಿರುಚಾಟ ಶಕುನವೆಂದು ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಹಸುಗಳು ಮಾತನಾಡುತ್ತಿದ್ದವು ಮತ್ತು ಮನೆಯ ಯಜಮಾನನಿಗೆ ಅಪಾಯವಿರುವಾಗ ಎಚ್ಚರಿಸುತ್ತಿದ್ದವು ಎಂಬ ನಂಬಿಕೆಯಿತ್ತು. ಆದರೆ ಈಗ ಹಸುಗಳು ಚೀರಾಟದ ಮೂಲಕ ಮುಸ್ಸೂಚನೆ ನೀಡುತ್ತವೆ. ಅದೇ ರೀತಿ, ನಾಯಿಗಳು ವಿಚಿತ್ರವಾಗಿ ಕೂಗುವುದು ಅಪಾಯದ ಸೂಚನೆಯಾಗಿರಬಹುದು. ಈ ಬಗ್ಗೆ ಗುರೂಜಿ ಮಾಹಿತಿ ನೀಡಿದ್ದಾರೆ ವಿಡಿಯೋ ನೋಡಿ.

Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More