ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?

Updated on: Apr 16, 2025 | 6:55 AM

ದೇವರು ಅಥವಾ ದೇವರ ಮೂರ್ತಿ ಕನಸಿನಲ್ಲಿ ಕಾಣಿಸಿಕೊಂಡರೆ ಶುಭ ಸೂಚಕವಾಗಿದೆ. ಇಷ್ಟದೇವರು, ಕುಲದೇವತೆ ಅಥವಾ ಹಾರಕೆಯ ದೇವತೆಗಳ ಕನಸು ಅಚಲ ಶಕ್ತಿ ಮತ್ತು ಯಶಸ್ಸಿನ ಸಂಕೇತವಾಗಿದೆ. ಗುರುಗಳ ಕನಸು ಕುಟುಂಬದ ಐಶ್ವರ್ಯ ಮತ್ತು ರಕ್ಷಣೆಯನ್ನು ಸೂಚಿಸುತ್ತದೆ. ಈ ರೀತಿಯ ಕನಸು ಕಂಡ ನಂತರ, ದೇವರನ್ನು ಸ್ಮರಿಸುವುದು ಒಳಿತು.

ಬೆಂಗಳೂರು, ಏಪ್ರಿಲ್​ 16: ಕನಸುಗಳು ಮಾನವ ಅನುಭವದ ಒಂದು ಅವಿಭಾಜ್ಯ ಅಂಗವಾಗಿದೆ. ಕೆಲವೊಮ್ಮೆ ನಾವು ಅಸಾಮಾನ್ಯ ಅಥವಾ ಅರ್ಥೈಸಲು ಕಷ್ಟಕರವಾದ ಕನಸುಗಳನ್ನು ಕಾಣುತ್ತೇವೆ. ದೇವರು ಅಥವಾ ದೇವರ ಮೂರ್ತಿಗಳು ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಕನಸುಗಳು ಸಾಮಾನ್ಯವಾಗಿ ಶುಭ ಫಲಗಳನ್ನು ಸೂಚಿಸುತ್ತವೆ ಎಂದು ನಂಬಲಾಗುತ್ತದೆ. ಇಷ್ಟದೇವರು, ಕುಲದೇವತೆ ಅಥವಾ ಗುರುಗಳು ಕಾಣಿಸಿಕೊಂಡರೆ, ಅದು ಆತ್ಮವಿಶ್ವಾಸ ಮತ್ತು ಯಶಸ್ಸಿನ ಸಂಕೇತವಾಗಿದೆ. ಈ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವಿಡಿಯೋ ನೋಡಿ.

 

Published on: Apr 16, 2025 06:54 AM
Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More