5 ಗ್ರಹಗಳ ಶುಭಫಲದಿಂದ ಇಂದು ಮೇಷ ರಾಶಿಯವರಿಗೆ ಭರ್ಜರಿ ಅದೃಷ್ಟ

Updated on: Nov 19, 2026 | 6:29 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 19, 2026ರ ದೈನಂದಿನ ರಾಶಿಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಮೇಷ ರಾಶಿಯವರಿಗೆ ಪಂಚಗ್ರಹಗಳ ಶುಭಫಲದಿಂದ ಆರ್ಥಿಕ ಅಭಿವೃದ್ಧಿ, ಕುಟುಂಬದಲ್ಲಿ ಸೌಖ್ಯ ಹಾಗೂ ವೃತ್ತಿ ಜೀವನದಲ್ಲಿ ಪ್ರಗತಿ ಇರುತ್ತದೆ. ಇಂದಿನ ಶುಭ ಸಮಯಗಳು ಮತ್ತು ವಿಶೇಷ ಘಟನೆಗಳ ಮಾಹಿತಿ ಕೂಡ ಲಭ್ಯವಿದೆ.

ಬೆಂಗಳೂರು, ನ.19: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ನವೆಂಬರ್ 19, ಗುರುವಾರಕ್ಕಾಗಿ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸದ ಶರದೃತು ಶುಕ್ಲ ಪಕ್ಷ ದಶಮಿ, ಪೂರ್ವಾಭಾದ್ರ ನಕ್ಷತ್ರ, ಹರ್ಷಣ ಯೋಗ ಮತ್ತು ತೈತಿಲಕರಣ ಇರತಕ್ಕಂತ ಈ ದಿನದಂದು ರಾಹುಕಾಲ ಮಧ್ಯಾಹ್ನ 1 ಗಂಟೆ 31 ನಿಮಿಷದಿಂದ 2 ಗಂಟೆ 57 ನಿಮಿಷದವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭ ಕಾಲವು ಮಧ್ಯಾಹ್ನ 12 ಗಂಟೆ 4 ನಿಮಿಷದಿಂದ 1 ಗಂಟೆ 31 ನಿಮಿಷದವರೆಗೆ ಇರಲಿದೆ. ಇಂದು ಕುಣಿಗಲ್ ಅಟವೀಶ್ವರ ಸ್ವಾಮಿಗಳ ಪುಣ್ಯತಿಥಿ, ಚಪ್ಪಗಿರಿ ವಿಜಯ ದಾಸರ ಆರಾಧನಾ ಮಹೋತ್ಸವ ಮತ್ತು ಬೆಳಗಿರಹಳ್ಳಿಯಲ್ಲಿ ಭೂಕೈಲಾಸೋತ್ಸವ ನಡೆಯಲಿದೆ. ಹಾಗೆಯೇ ಇದು ವಿಶ್ವ ಅಂತರರಾಷ್ಟ್ರೀಯ ಪುರುಷರ ದಿನವೂ ಹೌದು. ಇಂದು ರವಿ ವೃಶ್ಚಿಕ ರಾಶಿಯಲ್ಲಿದ್ದರೆ, ಚಂದ್ರ ಮೀನ ರಾಶಿಯ ಪೂರ್ವಾಭಾದ್ರ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಮೇಷ ರಾಶಿಯವರಿಗೆ ರಾಶ್ಯಾಧಿಪತಿ ಕುಜ. ಐದು ಗ್ರಹಗಳ ಶುಭಫಲ ಇರುವುದರಿಂದ ಇವರ ಆಶೆ ಆಕಾಂಕ್ಷೆಗಳು ಈಡೇರುತ್ತವೆ. ವ್ಯವಹಾರಗಳಲ್ಲಿ ಯಶಸ್ಸು, ಆರ್ಥಿಕವಾಗಿ ಉತ್ತಮ ಫಲ ಮತ್ತು ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ಕುಟುಂಬದಲ್ಲಿ ಸೌಖ್ಯ ಇರಲಿದ್ದು, ಮಕ್ಕಳಿಂದ ಶುಭ ಸಮಾಚಾರ ಕೇಳುವಿರಿ. ಹೊಸ ವ್ಯವಹಾರಗಳ ಬಗ್ಗೆ ಯೋಚಿಸುವಿರಿ ಮತ್ತು ಯೋಜನೆಗಳಿಗೆ ಮನ್ನಣೆ ದೊರೆಯುತ್ತದೆ. ವಾಹನ ಯೋಗ ತುಂಬಾ ಚೆನ್ನಾಗಿದ್ದು, ವೃತ್ತಿ ಜೀವನದಲ್ಲಿ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ರೂಪುಗೊಳ್ಳಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More