ವೃಶ್ಚಿಕ ಸಂಕ್ರಮಣದ ಶುಭ ದಿನದಂದು ಮೇಷ, ವೃಷಭ, ಮಿಥುನ ಸೇರಿದಂತೆ ದ್ವಾದಶ ರಾಶಿಗಳ ಫಲ ಹೇಗಿದೆ?

Updated on: Nov 17, 2026 | 6:31 AM

ತಾರೀಖು 17-11-2026 ರ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ. ವೃಶ್ಚಿಕ ಸಂಕ್ರಮಣ, ಗೋಪಾಷ್ಟಮಿ, ಮತ್ತು ಗ್ರಹಗಳ ಸಂಚಾರದ ಪ್ರಭಾವದಿಂದ ದ್ವಾದಶ ರಾಶಿಗಳ ಮೇಲೆ ಉಂಟಾಗುವ ಶುಭ ಹಾಗೂ ಅಶುಭ ಫಲಗಳನ್ನು, ಆರೋಗ್ಯ, ಹಣಕಾಸು, ವೃತ್ತಿ ಮತ್ತು ಸಂಬಂಧಗಳ ಕುರಿತಾದ ನಿಖರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು, ನ.17: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 17 ನವೆಂಬರ್ 2026 ರ ಮಂಗಳವಾರದ ದ್ವಾದಶ ರಾಶಿಗಳ ದೈನಂದಿನ ಭವಿಷ್ಯವನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು ಶುಕ್ಲಪಕ್ಷ ಅಷ್ಟಮಿ, ಧನಿಷ್ಠ ನಕ್ಷತ್ರ, ಧ್ರುವ ಯೋಗ, ಭವಕರಣೆ ಇರತಕ್ಕಂತ ಶುಭ ದಿನ. ವಿಶೇಷವಾಗಿ ಇಂದು ವೃಶ್ಚಿಕ ಸಂಕ್ರಮಣ, ಗೋಪಾಷ್ಟಮಿ, ಶೃಂಗೇರಿಯಲ್ಲಿ ವಿದ್ಯಾಶಂಕರ ಸ್ವಾಮಿಗಳ ರಥೋತ್ಸವ ಮತ್ತು ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವ ನಡೆಯಲಿದೆ. ಇಂದು ರವಿ ವೃಶ್ಚಿಕ ರಾಶಿಯಲ್ಲಿ ಮತ್ತು ಚಂದ್ರ ಮಕರ ರಾಶಿಯ ಧನಿಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಕುಜ ನಕ್ಷತ್ರದ ಪ್ರಭಾವದಿಂದ ಸುಬ್ರಹ್ಮಣ್ಯನ ಆರಾಧನೆಯು ಕುಜ ದೋಷ, ಸರ್ಪ ದೋಷ, ವಿವಾಹ ಅಥವಾ ಸಂತಾನಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಹಾಗೂ ಕುಟುಂಬದಲ್ಲಿ ಬೆಂಬಲ ದೊರೆಯಲಿದ್ದು, ವೃತ್ತಿಯಲ್ಲಿ ಅಪವಾದಗಳಿಂದ ಮುಕ್ತಿ ಸಿಗಲಿದೆ. ವೃಷಭ ರಾಶಿಯವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಪರಿವರ್ತನೆ ಮತ್ತು ಆದಾಯ ಹೆಚ್ಚಳವಾಗಲಿದೆ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ ಮತ್ತು ಅಧಿಕಾರ ಪ್ರಾಪ್ತಿಯ ಯೋಗವಿದೆ. ಪ್ರತಿಯೊಂದು ರಾಶಿಯವರಿಗೂ ಆಯಾ ಗ್ರಹಗಳ ಸಂಚಾರದ ಆಧಾರದ ಮೇಲೆ ಹಣಕಾಸು, ಆರೋಗ್ಯ, ವೃತ್ತಿ ಮತ್ತು ಸಂಬಂಧಗಳ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More