Puneeth Rajkumar: ಅಪ್ಪು ಎಂದಿಗೂ ನಮ್ಮ ಜೊತೆಯಲ್ಲೇ ಇರುತ್ತಾರೆ; ಇಮ್ರಾನ್ ಸರ್ದಾರಿಯಾ ಭಾವುಕ ಮಾತು
Imran Sardaria: ಡಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ನಟ ಪುನೀತ್ ರಾಜಕುಮಾರ್ ಸಮಾಧಿಯ ದರ್ಶನ ಪಡೆದು, ನಮನ ಸಲ್ಲಿಸಿದ್ದಾರೆ. ಈ ವೇಳೆ ಅವರು ಪುನೀತ್ ಜೊತೆಗಿನ ಕೊನೆಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.
ಬೆಂಗಳೂರು: ನಟ ಪುನೀತ್ ರಾಜಕುಮಾರ್ ಸಮಾಧಿಯ ದರ್ಶನ ಪಡೆದು, ಚಿತ್ರರಂಗದ ಹಲವರು ನಮನ ಸಲ್ಲಿಸುತ್ತಿದ್ದಾರೆ. ಇಂದು ಪುನೀತ್ ಆಪ್ತರಾಗಿದ್ದು ಡಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಆಗಮಿಸಿ, ದರ್ಶನ ಪಡೆದು, ನಮನ ಸಲ್ಲಿಸಿದ್ದಾರೆ. ಅಭಿಮಾನಿಗಳ ನಡುವೆಯೇ ಅವರು ಆಗಮಿಸಿ ದರ್ಆಶನ ಪಡೆದರು. ನಂತರ ಮಾತನಾಡಿದ ಅವರು, ಪುನೀತ್ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡರು. ‘‘ಮೊದಲನೆಯದಾಗಿ ಅವರು ಇಲ್ಲ ಅನ್ನುವುದನ್ನೇ ನಾನು ಒಪ್ಪುವುದಿಲ್ಲ. ಅವರು ಎಂದಿಗೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅಪ್ಪು ಜೊತೆ ಸಾಕಷ್ಟು ಸಮಯ ಕಳೆದಿದ್ದೇನೆ, ಅವರು ಯಾರನ್ನೂ ಕೀಳಾಗಿ ಕಂಡವರಲ್ಲ. ಈ ಘಟನೆಗೂ 1 ವಾರ ಮುಂಚೆ ಅವರನ್ನ ಭೇಟಿಯಾಗಿ ಗೋವಾಗೆ ತೆರಳಿದ್ದೆ. ಕರೆ ಮಾಡಿದಾಗ ಬಂದ ತಕ್ಷಣ ಭೇಟಿಯಾಗಲು ಹೇಳಿದ್ದರು. ಆದರೆ ಈ ರೀತಿ ಅವರನ್ನು ಬಂದು ನೋಡಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನಗೆ ಈ ಸಂದರ್ಭದಲ್ಲಿ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ’’ ಎಂದು ಇಮ್ರಾನ್ ಸರ್ದಾರಿಯಾ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ:
Puneeth Rajkumar: ಪುನೀತ್ಗೆ ಪದ್ಮ ಪ್ರಶಸ್ತಿ ನೀಡಲು ಅಭಿಮಾನಿಗಳ ಒತ್ತಾಯ; ಅಗತ್ಯ ಕ್ರಮಕ್ಕೆ ಮುಂದಾದ ಸರ್ಕಾರ