ಪ್ರತಿ ಭಾನುವಾರ ಜಗಳೂರು ಪಟ್ಟಣದಲ್ಲಿ ಕಸಗುಡಿಸುವೆ ಎಂದ ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ, ಇಂದಿರಾ ಕ್ಯಾಂಟೀನ್​​ನಲ್ಲಿ ಊಟ ಮಾಡಿದರು

Edited By: ಸಾಧು ಶ್ರೀನಾಥ್​

Updated on: Jul 10, 2023 | 11:48 AM

Jagalur Congress MLA: ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ತಾಲೂಕಾ ಮಟ್ಟದ ಅಧಿಕಾರಿಗಳನ್ನು ಜೊತೆಗೆ ಕರೆದುಕೊಂಡು ಜಗಳೂರು ಪಟ್ಟಣದ ಬಹುತೇಕ ಕಡೆ ಕಸಗುಡಿಸಿದರು.

ಭಾನುವಾರ ಬಂದ್ರೆ ಸಾಕು ಅಲ್ಲೊಬ್ಬ ಶಾಸಕ ಪೊರಕೆ (Broom) ಹಿಡಿದುಕೊಂಡು ಬೀದಿ ಬೀದಿ ಸುತ್ತಾಡುತ್ತಾರೆ. ಈಗ ಅವರ ಹಿಂದೆ ಅಧಿಕಾರಿಗಳು ಸಹ ಬರುತ್ತಿದ್ದಾರೆ. ನಿನ್ನೆ ಭಾನುವಾರ ಬೆಳಿಗ್ಗೆಯಿಂದ (ಜುಲೈ 9) ಜಗಳೂರು ಪಟ್ಟಣದ ಬಹುತೇಕ ಕಡೆ ಹೀಗೆ ಕಸಗುಡಿಸಿದ ಶಾಸಕ‌ರು ಬಿ. ದೇವೇಂದ್ರಪ್ಪ ಅಂತಾ. ಇವರು ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕರು (Jagalur Congress MLA). ತಾಲೂಕಾ ಮಟ್ಟದ ಅಧಿಕಾರಿಗಳನ್ನು ಜೊತೆಗೆ ಕರೆದುಕೊಂಡು ಜಗಳೂರು ಪಟ್ಟಣದ ಬಹುತೇಕ ಕಡೆ ಕಸಗುಡಿಸಿದರು. ಹೀಗೆ ಕಸಗುಡಿಸಿದ ಬಳಿಕ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿದ ಶಾಸಕ ದೇವೇಂದ್ರಪ್ಪ (B Devendrappa) ಅವರು ಪ್ರತಿ ಭಾನುವಾರ ಇಡೀ ದಿನ ಪಟ್ಟಣದ ಸ್ವಚ್ಛತೆಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ವಿನಮ್ರವಾಗಿ ಹೇಳಿದರು.

ಜಗಳೂರು ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More