Video: ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ: ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆ

|

Updated on: Jun 06, 2023 | 5:31 PM

ಆ್ಯಂಬುಲೆನ್ಸ್​ನಲ್ಲಿ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿರುವಂತಹ ಪ್ರಸಂಗ ಜಿಲ್ಲೆಯ ಜಗಳೂರು‌ ತಾಲೂಕಿನ ಬಿಳಿಚೋಡ ಗ್ರಾಮದಲ್ಲಿ ಕಂಡುಬಂದಿದೆ.

ದಾವಣಗೆರೆ: ಆ್ಯಂಬುಲೆನ್ಸ್​ (ambulance) ನಲ್ಲಿ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿರುವಂತಹ ಪ್ರಸಂಗ ಜಿಲ್ಲೆಯ ಜಗಳೂರು‌ ತಾಲೂಕಿನ ಬಿಳಿಚೋಡ ಗ್ರಾಮದಲ್ಲಿ ಕಂಡುಬಂದಿದೆ. ದುರಗಮ್ಮ ಮಗುವಿಗೆ ಜನ್ಮನೀಡಿದ ಮಹಿಳೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥರು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ನೋವು ತೀವ್ರವಾಗಿದ್ದು, ದಾರಿ ಮಧ್ಯೆ ಹೆರಿಗೆ ಆಗಿದೆ. ಸಿಬ್ಬಂದಿ ಕರಿಬಸಪ್ಪ ಹಾಗೂ ಅಂಬ್ಯುಲೆನ್ಸ್ ಚಾಲಕ ಮುದ್ದು ಕೃಷ್ಣರಿಂದ ಸಹಾಯ ಮಾಡಲಾಗಿದೆ. ಬಳಿಕ ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow us on