Video: ದೆಹಲಿ-ಕೋಲ್ಕತ್ತಾ ಹೆದ್ದಾರಿಯಲ್ಲಿ 20ಕಿ.ಮೀ ಟ್ರಾಫಿಕ್ ಜಾಮ್, 3 ದಿನಗಳಿಂದ ನಿಂತಲ್ಲೇ ನಿಂತಿವೆ ವಾಹನಗಳು

Updated on: Oct 08, 2025 | 10:09 AM

ದೆಹಲಿ-ಕೋಲ್ಕತ್ತಾ ನಡುವೆ ಕಳೆದ ಮೂರು ದಿನಗಳಿಂದ ವಿಪರೀತ ಸಂಚಾರ ದಟ್ಟಣೆಯುಂಟಾಗಿದೆ. 20ಕಿಮೀ ದೂರದವರೆಗೆ ಭಾರಿ ಟ್ರಾಫಿಕ್ ಜಾಮ್ ಇದ್ದು, ವಾಹನಗಳು ಮೂರು ದಿನಗಳಿಂದ ನಿಂತಲ್ಲೇ ನಿಂತಿವೆ, ಸಾವಿರಾರು ಜನರು ಪರದಾಡುವಂತಾಗಿದೆ. 24 ಗಂಟೆಗಳಲ್ಲಿ ಕೇವಲ 5ಕಿ.ಮೀ ದೂರವಷ್ಟೇ ಸಾಗಲು ಸಾಧ್ಯವಾಗಿದೆ. ಆಹಾರವಿಲ್ಲ, ರಸ್ತೆಬದಿಯಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ತಿಂಡಿಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ಒಡಿಶಾದಿಂದ ದೆಹಲಿಗೆ ತೆರಳುತ್ತಿದ್ದ ಟ್ರಕ್ ಚಾಲಕ ದುಬನ್ ಕುಮಾರ್ ಹೇಳಿದ್ದಾರೆ.

ದೆಹಲಿ-ಕೋಲ್ಕತ್ತಾ ನಡುವೆ ಕಳೆದ ಮೂರು ದಿನಗಳಿಂದ ವಿಪರೀತ ಸಂಚಾರ ದಟ್ಟಣೆಯುಂಟಾಗಿದೆ.  20ಕಿಮೀ ದೂರದವರೆಗೆ ಭಾರಿ ಟ್ರಾಫಿಕ್ ಜಾಮ್ ಇದ್ದು, ವಾಹನಗಳು ಮೂರು ದಿನಗಳಿಂದ ನಿಂತಲ್ಲೇ ನಿಂತಿವೆ, ಸಾವಿರಾರು ಜನರು ಪರದಾಡುವಂತಾಗಿದೆ. 24 ಗಂಟೆಗಳಲ್ಲಿ ಕೇವಲ 5ಕಿ.ಮೀ ದೂರವಷ್ಟೇ ಸಾಗಲು ಸಾಧ್ಯವಾಗಿದೆ. ಆಹಾರವಿಲ್ಲ, ರಸ್ತೆಬದಿಯಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ತಿಂಡಿಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ಒಡಿಶಾದಿಂದ ದೆಹಲಿಗೆ ತೆರಳುತ್ತಿದ್ದ ಟ್ರಕ್ ಚಾಲಕ ದುಬನ್ ಕುಮಾರ್ ಹೇಳಿದ್ದಾರೆ. ಈ ಹೆದ್ದಾರಿಯು ಕೋಲ್ಕತ್ತಾ ಮತ್ತು ದೆಹಲಿಯನ್ನು ಸಂಪರ್ಕಿಸುತ್ತದೆ ಮತ್ತು ಆದ್ದರಿಂದ ಇದು ವ್ಯಾಪಾರ ಸಾರಿಗೆಗೆ ಪ್ರಾಥಮಿಕ ಮಾರ್ಗವಾಗಿದೆ. ಶಿವಸಾಗರ್ ಬಳಿ ಎನ್‌ಎಚ್‌ಎಐ ನಡೆಸುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಈ ಅಡಚಣೆ ಉಂಟಾಗಿದೆ. ಮಳೆಯೂ ಕೂಡ ಪ್ರಮುಖ ಕಾರಣವಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More