Daily Devotional: ಮನೆಗೆ ಅಡಿಪಾಯ ಹಾಕುವ ಮುನ್ನ ಆಯಾ ಹೇಗೆ ನೋಡಬೇಕು?

Updated on: Sep 10, 2025 | 6:48 AM

ಡಾ. ಬಸವರಾಜ್ ಗುರುಜಿಯವರ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೂ ಮುನ್ನ ಆಯ (ಆಯುಷ್ಯ) ಪರಿಗಣಿಸುವುದರ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಮನೆಯ ಉದ್ದ ಮತ್ತು ಅಗಲವನ್ನು ಗಣನೆಗೆ ತೆಗೆದುಕೊಂಡು ಆಯ ನಿರ್ಧರಿಸಲಾಗುತ್ತದೆ. ಧ್ವಜಾಯ, ವೃಷಭಾಯ, ಮತ್ತು ಗಜಾಯ ಆಯಗಳು ಮನೆ ನಿರ್ಮಾಣಕ್ಕೆ ಶುಭಕರ ಎಂದು ಪರಿಗಣಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​ 10: ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಆದರೆ, ಮನೆ ನಿರ್ಮಾಣಕ್ಕೂ ಮುನ್ನ ಕೆಲವು ಅಂಶಗಳನ್ನು ಪರಿಗಣಿಸುವುದು ಅವಶ್ಯಕ. ಮನೆಗೆ ಅಡಿಪಾಯ ಹಾಕುವ ಮುನ್ನ ಆಯಾ ಹೇಗೆ ನೋಡಬೇಕು ಎಂದು ಗುರೂಜಿ ತಿಳಿಸಿದ್ದಾರೆ. ಆಯ ಎಂದರೆ ಆಯುಷ್ಯ. ಮನೆಯ ಉದ್ದ ಮತ್ತು ಅಗಲವನ್ನು ಗುಣಿಸಿ, ಒಂಬತ್ತರಿಂದ ಗುಣಿಸಿ ಮತ್ತು ಎಂಟರಿಂದ ಭಾಗಿಸಿದಾಗ ಬರುವ ಉಳಿಕೆ ಆಯವನ್ನು ನಿರ್ಧರಿಸುತ್ತದೆ. ಧ್ವಜಾಯ, ವೃಷಭಾಯ ಮತ್ತು ಗಜಾಯ ಆಯಗಳು ಮನೆ ನಿರ್ಮಾಣಕ್ಕೆ ಅತ್ಯಂತ ಶುಭಕರ.

Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More